ಸುಳ್ಳು ಹೇಳಿಕೆ ನೀಡಿ ಸಿಕ್ಕಿಬಿದ್ದ ಬಿಜೆಪಿ ಎಂಪಿ ಪರೇಶ್ ರಾವಲ್

ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ¨ಗ್ಗೆ ಸುಳ್ಳು ಮಾಹಿತಿಗಳನ್ನುಹರಡುವ ವ್ಯವಸ್ಥಿತ ಜಾಲವೇ ಸೃಷ್ಟಿಯಾಗಿದ್ದು, ಪರೇಶ್ ರಾವಲ್ ಸಹ ಇದರಲ್ಲಿ ಭಾಗಿಯಾದಂತಿದೆ.

ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ ಹಿನ್ನೆಲೆಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಬಾಲಿವುಡ್ ನಟ ಮತ್ತು ಬಿಜೆಪಿ ಸಂಸದ ಪರೇಶ್ ರಾವಲ್ ಮುಜುಗರಕ್ಕೀಡಾಗಿದ್ದು, ತಾವೇ ತೋಡಿದ ಹಳ್ಳಕ್ಕೆ ಬಿದ್ದಂತಾಗಿದೆ.

ಗೌರಿ ಲಂಕೇಶ್ ಅಂತ್ಯಕ್ರಿಯೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಕಲ ಸರ್ಕಾರಿ ಗೌರವ ಸಲ್ಲಿಸಿದ್ದನ್ನು ಆಕ್ಷೇಪಿಸಿರುವ ಪರೇಶ್ ರಾವಲ್, 26/11ರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾದ ಮೇಜರ್ ಸಂದೀಪ್ ಉನ್ನಿಕೃಷ್ಣನಗೆ ಸರ್ಕಾರಿ ಗೌರವ ಸಲ್ಲಿಸದೆಯೇ ಅಂತ್ಯಸಂಸ್ಕಾರ ನಡೆಸಿದ ಸರ್ಕಾರ ಗೌರಿ ಲಂಕೇಶಗೆ ಈ ಗೌರವ ಸಲ್ಲಿಸಿರುವುದು ಅಕ್ಷಮ್ಯ ಎಂದು ತಮ್ಮ ಟ್ವಿಟರ್ ಸಂದೇಶದ ಮೂಲಕ ಆರೋಪಿಸಿದ್ದಾರೆ.

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾರ ಉನ್ನಿಕೃಷ್ಣನ್ ಬೆಂಗಳೂರಿನವರೇ ಆದರೂ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲಿಲ್ಲ ಎಂದು ರಾವಲ್ ಆರೋಪಿಸಿದ್ದಾರೆ. ಒಬ್ಬ ಹುತಾತ್ಮ ಯೋಧನಿಗೆ ಸಲ್ಲಿಸದ ಗೌರವವನ್ನು ಒಬ್ಬ ಪತ್ರಕರ್ತೆಗೆ ಸಲ್ಲಿಸಿರುವುದು ಸರ್ಕಾರದ ಠಕ್ಕುತನವನ್ನು ತೋರಿಸುತ್ತದೆ ಎಂದು ಬಿಂಬಿಸಲು ರಾವಲ್ ಈ ಸಂದೇಶವನ್ನು ನೀಡಿದ್ದಾರೆ.

ಆದರೆ ಮೇಜರ್ ಜನರಲ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮನಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತ್ತು ಎಂಬ ಮಾಹಿತಿ ಪರೇಶ್ ರಾವಲ್ ಗಮನಕ್ಕೆ ತಡವಾಗಿ ಬಂದಿದೆ.  ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಉನ್ನಿಕೃಷ್ಣನಗೆ ಗೌರವಯುತ ಅಂತ್ಯಕ್ರಿಯೆ ನಡೆಸಲಾಗಿದ್ದನ್ನು ಅಂದಿನ ಪ್ರಮುಖ ಪತ್ರಿಕೆಗಳೂ ವರದಿ ಮಾಡಿವೆ. ನಂತರ ತಮ್ಮ ತಪ್ಪನ್ನು ಅರಿತು ಹಲವಾರು ಟ್ವಿಟರಿಗರಿಂದ ಟೀಕೆಗೊಳಗಾದ ನಂತರ ಪರೇಶ್ ರಾವಲ್ ತಾವು ಬರೆಯುವಾಗ ಉಂಟಾದ ಪ್ರಮಾದಕ್ಕೆ ಕ್ಷಮೆ ಯಾಚಿಸಿದ್ದಾರೆ.

ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ¨ಗ್ಗೆ ಸುಳ್ಳು ಮಾಹಿತಿಗಳನ್ನು ಹರಡುವ ವ್ಯವಸ್ಥಿತ ಜಾಲವೇ ಸೃಷ್ಟಿಯಾಗಿದ್ದು, ಪರೇಶ್ ರಾವಲ್ ಸಹ ಇದರಲ್ಲಿ ಭಾಗಿಯಾದಂತಿದೆ.