ರಾಹುಲ್ ಗಾಂಧಿ ವೇಶ್ಯೆ ಎಂದ ಬಿಜೆಪಿ ಸಂಸದ

ಉಜ್ಜಯನಿ :  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು `ನಗರ್ ವಧು’ ಎಂದು ಬಣ್ಣಿಸಿ ಉಜ್ಜಯನಿಯ ಬಿಜೆಪಿ ಸಂಸದ ಚಿಂತಾಮಣಿ ಮಾಲವಿಯ ವಿವಾದಕ್ಕೀಡಾಗಿದ್ದಾರೆ.  ಪ್ರಾಚೀನ ಕಾಲದಲ್ಲಿ `ನಗರ ವಧು’ ಪದ್ಧತಿ ಚಾಲ್ತಿಯಲ್ಲಿದ್ದರೂ ಅದು ವೇಶ್ಯೆ ಎಂಬ ಅರ್ಥ ನೀಡುವುದರಿಂದ ಹಾಗೂ ಆ ಪದವನ್ನು ಕಾಂಗ್ರೆಸ್ ಉಪಾಧ್ಯಕ್ಷನಿಗೆ ಉಪಯೋಗಿಸಿರುವುದರಿಂದ ವಿವಾದಕ್ಕೆ ಕಾರಣವಾಗಿದೆ.