ಪ್ರ್ರಮೋದ್ ಮುತಾಲಿಕರೇ ಬಿಜೆಪಿಯವರೇನು ಕಮ್ಮಿಯೇ

ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ರೀತಿಯಲ್ಲಿಯೇ ಆದಾಯ ತೆರಿಗೆ ಅಧಿಕಾರಿಗಳು ಇತರ ಕಾಂಗ್ರೆಸ್ ನಾಯಕರ ಮನೆ ಮೇಲೂ ದಾಳಿ ನಡೆಸಿದರೆ ದೇಶದ ಬಡತನ ನಿಶ್ಚಿತವಾಗಿ ನಿರ್ಮೂಲನೆಯಾಗಬಹುದು ಕಾಂಗ್ರೆಸ್ ಪಕ್ಷದವರು ಕಳೆದ 50 ವರ್ಷದಿಂದ ದೇಶವನ್ನು ಲೂಟಿ ಮಾಡಿದ್ದಾರೆ ಅವರ ದುರಾಡಳಿತದ ಪರಿಣಾಮ ದೇಶದಲ್ಲಿ ಬಡತನ ಎಲ್ಲಿದೆಯೋ ಅಲ್ಲಿಯೇ ಇದೆ ಎನ್ನುತ್ತಿರಲ್ಲ ಬಿಜೆಪಿಯವರೇನು ಕಡಿಮೆ ಕೂಡಿ ಹಾಕಿದ್ದಾರೆಯೇ ರಾಜ್ಯದಲ್ಲಿ ಯಡ್ಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವರುಗಳು ಏನೆಲ್ಲ ಮಾಡಿದ್ದರು ಯಾರೆಲ್ಲ ಜೈಲಿಗೆ ಹೋದರು ಅದೇ ಕಳೆದ 50 ವರ್ಷದಲ್ಲಿ ಕಾಂಗ್ರೆಸ್ಸಿನವರು ಎಷ್ಟು ಜನ ಜೈಲಿಗೆ ಹೋದರು ಎಂಬುದು ಮುತಾಲಿಕರಿಗೆ ಗೊತ್ತಿರಬಹುದು ಕಾಂಗ್ರೆಸ್ಸಿನವರು 50 ವರ್ಷದಲ್ಲಿ ಮಾಡಿದ್ದನ್ನು ರಾಜ್ಯದಲ್ಲಿ ಅಧಿಕಾರ ಸಿಕ್ಕಿತ್ತು ಎಂದು ಹೇಳಿ ಯಡ್ಡಿಯೂರಪ್ಪರು ಐದು ವರ್ಷದಲ್ಲಿಯೇ ಮಾಡಲು ಹೋಗಿದ್ದು, ನಿಮಗೆ ತಿಳಿದಿಲ್ಲವೇ ಇನ್ನಾದರೂ ಕಾಂಗ್ರೆಸ್ ಪಕ್ಷವನ್ನು ದೂಷಿಸುವಾಗ ಎಚ್ಚರವಿರಲಿ ನಿಮ್ಮ ಸುತ್ತಮುತ್ತವಿರುವ ಬಿಜೆಪಿಯವರೇನೂ ಸಾಚಾರಲ್ಲ ತಿಳಿದಿರಲಿ

  • ಉದಯ ಬಂಗೇರ  ಬೈಂದೂರು