ಬಿಜೆಪಿ ಅಧಿಕಾರಕ್ಕೆ ಬರುವುದು ಆ ಪಕ್ಷದವರಿಗೇ ಬೇಕಾಗಿಲ್ಲ

ರಾಜ್ಯದಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಲಕ್ಷಣಗಳು ದಿನಕಳೆದಂತೆಲ್ಲ ಕ್ಷೀಣಸತೊಡಗಿವೆ  ಅಂದ ಹಾಗೆ ಮಿಷನ್ 150 ಮೂಲಕ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವಂತೆ ಮಾಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಹೇಳುತ್ತಾರೆ ಆದರೆ  ಯಡ್ಡಿಯೂರಪ್ಪ ಅವರು ನೇತೃತ್ವದಲ್ಲಿ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರದಿರಲಿ ಎಂದು ಸ್ವಪಕ್ಷೀಯರನೇಕರು ಬಯಸುತ್ತಿದ್ದಾರೆ
ಹೀಗಾಗಿ ಯಡ್ಡಿಯೂರಪ್ಪರಿಗೆ ಮಿಷನ್ 150 ಗುರಿಯಾಗಿದ್ದರೆ  ಪಕ್ಷದಲ್ಲಿರುವ ಅನೇಕರಿಗೆ ಮಿಷನ್ 75 ಎಂಬುದೇ ಮುಖ್ಯ ಗುರಿಯಾಗಿದೆ. ಸಹಜವಾಗಿ ಆಡಳಿತ ಪಕ್ಷದಲ್ಲಿ ಇಂತಹ ವಿಕರ್ಷಕ ಮನಃಸ್ಥಿತಿ ಇರುತ್ತದೆ
ಇದಕ್ಕೆ ಮುಖ್ಯ ಕಾರಣ  ನಾಯಕರಾದವರು ತಮ್ಮ ನಿರೀಕ್ಷೆಯನ್ನು ಈಡೇರಿಸಿಲ್ಲ ಎಂಬುದು  ತಾವು ಹೇಳಿದ್ದನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಅಂತ ಯಡ್ಡಿಯೂರಪ್ಪನ ಮೇಲೆ ಪುಕಾರು ಇದೆ  ಪ್ರತಿಪಕ್ಷವಾಗಿ ಕುಳಿತ ಬಿಜೆಪಿಯಲ್ಲೇ ಒಡಕಿನ ಬೀಜಗಳು ಬಿದ್ದಿವೆ
ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಯಡ್ಡಿಯೂರಪ್ಪರಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮನಸ್ಸಿಲ್ಲ  ಪದಾಧಿಕಾರಿಗಳ ರಚನೆ ನೇಮಕ, ಜಿಲ್ಲಾ ಸಮಿತಿಗಳ ರಚನೆಯ ಕುರಿತು ಏನೇ ಅಪಸ್ವರಗಳಿದ್ದರೂ ಅದನ್ನು ಸರಿಪಡಿಸಲು ಅವರು ಹೋಗಲಿಲ್ಲ  ಹೀಗಾಗಿ ಪಕ್ಷದ ಪ್ರಮುಖ ನಾಯಕರು ಹಾಗೂ ಆರೆಸ್ಸೆಸ್ ಕೆಲ ನಾಯಕರು ಸೇರಿ ಕೆ ಎಸ್ ಈಶ್ವರಪ್ಪರ ಕೈಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಸಿದರು. ಈಗ ಯಡಿಯೂರಪ್ಪ ಅದೇನೇ ಮಾಡಿದರೂ ಬ್ರಿಗೇಡನ್ನು ನಿರ್ಮೂಲ ಗೊಳಿಸಲು ಆಗುತ್ತಿಲ್ಲ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸುವಾಗ ಈಶ್ವರಪ್ಪ ಏನು ಹೇಳಿದರು   ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವುದು ಯಡ್ಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವುದು ಬ್ರಿಗೇಡ್ ಗುರಿ ಎಂದರು  ಈಗ ವಾರದ ಹಿಂದೆ ಅದೇ ಈಶ್ವರಪ್ಪನವರು ಈಗ ಯಾರನ್ನೋ ಮುಖ್ಯಮಂತ್ರಿ ಮಾಡುವುದು ಬ್ರಿಗೇಡ್ ಉದ್ದೇಶವಲ್ಲ  ಹಿಂದುಳಿದ ಹಾಗೂ ದಲಿತ ಸಮುದಾಯದ ಉದ್ಧಾರವೇ ಅದರ ಗುರಿ  ಬಿಜೆಪಿ ಅಧಿಕಾರಕ್ಕೆ ಬಂದರೂ ಅದು ಮುಂದುವರಿಯುತ್ತದೆ ಎನ್ನುತ್ತಿದ್ದಾರೆ
ಪರಿಸ್ಥಿತಿ ಇಷ್ಟೊಂದು ಹಂತಕ್ಕೆ ಬಂದು ನಿಂತ ಮೇಲೂ ಯಡ್ಡಿಯೂರಪ್ಪ ಅವರಿಗೆ ತಾವು ಮಾಡಿದ ತಪ್ಪಿಗಿಂತ  ತಮ್ಮ ಮಾತೇ ನಡೆಯಬೇಕು ತಾವು ಯಾರಿಗೆ ಪಕ್ಷವನ್ನು ಧಾರೆ ಎರೆದು ಕೊಡಲು ಸಜ್ಜಾಗಿದ್ದೇವೋ ಅದನ್ನು ಉಳಿದವರು ಸುಮ್ಮನೆ ಒಪ್ಪಿಕೊಳ್ಳಬೇಕು ಎಂಬ ಧೋರಣೆಯೇ ಇದೆ
ಹೀಗೆ ಅವರು ಪಕ್ಷವನ್ನು ಬೇರೆ ಯಾರಿಗೋ ಧಾರೆ ಎರೆಯಲು ತಯಾರಾಗಿರುವಾಗ ತಮ್ಮ ಶಕ್ತಿಯನ್ನೇಕೆ ಅದಕ್ಕಾಗಿ ಉಪಯೋಗಿಸಬೇಕು  ಅದರ ಬದಲು ಅತಂತ್ರ ಅಸೆಂಬ್ಲಿ ನಿರ್ಮಾಣವಾದರೆ ಯಡ್ಡಿಯೂರಪ್ಪ ಮತ್ತು ಅವರ ಗುಂಪು ರಾಜಕೀಯವಾಗಿ ನಿರ್ಮೂಲವಾಗುತ್ತದೆ ಎಂಬುದು ಅವರ ವಿರೋಧಿಗಳ ಲೆಕ್ಕಚಾರ  ಅಂದರೆ ಹಾಗೆ ಅಧಿಕಾರಕ್ಕೆ ಬರಲು ಒಂದು ಪ್ರತಿಪಕ್ಷ ಹವಣಿಸುವುದು ಸಹಜ. ಆದರೆ ಅಧಿಕಾರಕ್ಕೆ ಬರುವುದೇ ಬೇಡ ಎಂದು ಬಯಸುವುದು ನಿಜಕ್ಕೂ ಕುತೂಹಲದ ವಿಷಯ ಅಲ್ಲವೇ

  • ಆಕಾಶ್ ಶೆಟ್ಟಿ  ಬನ್ನಂಜೆ ಉಡುಪಿ