ಚೀನಾ ಸೊತ್ತು ಬಹಿಷ್ಕಾರಕ್ಕೆ ಬಿಜೆಪಿ ಸಭೆಯಲ್ಲಿ ನಿರ್ಧಾರ

ಬೆಂಗಳೂರು : ಡೋಕ್ಲಂ ವಿಷಯದಲ್ಲಿ ಭಾರತ ಮತ್ತು ಚೀನಾದ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಚೀನಾದ ಸೊತ್ತುಗಳನ್ನು ಬಹಿಷ್ಕರಿಸಿ, `ಸ್ವದೇಶಿ’ ಸೊತ್ತುಗಳಿಗೆ ಹೆಚ್ಚು ಆದ್ಯುತೆ ನೀಡಲು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. “ಗಡಿ ವಿಷಯದಲ್ಲಿ ಚೀನಾ ತಗಾದೆ ಎತ್ತಿರುವುದನ್ನು ಜನತೆ ಮುಂದೆ ಇಟ್ಟು, ಜನಜಾಗೃತಿ ಮೂಡಿಸಲಿದ್ದೇವೆ ಮತ್ತು ಚೀನಾ ಸೊತ್ತು ಮಾರಾಟ ಮಾಡದಂತೆ ವ್ಯಾಪಾರಿಗಳಲ್ಲಿ ಮನವರಿಕೆ ಮಾಡಲಿದ್ದೇವೆ” ಎಂದು ಸಭೆ ಬಳಿಕ ಪಕ್ಷದ ವಕ್ತಾರರು ಸುದ್ದಿಗಾರರಲ್ಲಿ ತಿಳಿಸಿದರು. ಪೂಜೆಗೆ ಅಗತ್ಯವಿರುವ ಕುಂಕುಮ ಮತ್ತು ಕರ್ಪೂರವನ್ನೂ ಚೀನಾದಿಂದಲೇ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದವರು ಹೇಳಿ, “ಚೀನಾದ ಮಾರುಕಟ್ಟೆ ಬಹುತೇಕ ಭಾರತದ ಮಾರುಕಟ್ಟೆ ಅವಲಂಬಿಸಿದೆ” ಎಂದರು.