ಪಕ್ಷದ ಬಿಕ್ಕಟ್ಟು ಶಮನಗೊಳಿಸುವ ಜವಾಬ್ದಾರಿ ಯಡ್ಡಿ ಮೇಲೆಯೇ ಹೊರಿಸಿದ ಕೇಂದ್ರ ನಾಯಕತ್ವ

ಬೆಂಗಳೂರು : “ರಾಜ್ಯದ ಮುಂದಿನ ಮುಖ್ಯಮಂತ್ರಿ ನೀವಾಗಬೇಕಿದ್ದರೆ ಮೊದಲು ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಹಾಗೂ ಭಿನ್ನಾಭಿಪ್ರಾಯಗಳ ಬೆಂಕಿಯನ್ನು ಶಮನಗೊಳಿಸಿ.”

-ಬಿಜೆಪಿಯ ಕೇಂದ್ರ ನಾಯಕತ್ವ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪಗೆ ನೀಡಿದ ನಿರ್ದೇಶನವಿದು.

ಮೂಲಗಳ ಪ್ರಕಾರ  ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಪಕ್ಷದ ಹಿರಿಯ ಸಂಸದರೊಂದಿಗೆ  ನಡೆದ ಸಭೆಯಲ್ಲಿ ಯಡ್ಡಿಯೂರಪ್ಪಗೆ ಪಕ್ಷ ಮೇಲಿನಂತೆ ಆದೇಶಿಸಿದೆ.

“ಕೇಂದ್ರ ನಾಂiÀiಕತ್ವ  ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸಲು ಮನಸ್ಸು ಮಾಡುತ್ತಿಲ್ಲವೆಂದೇನಲ್ಲ. ಆದರೆ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥನಾಗಿ ಹಾಗೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇಂತಹ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಪ್ರಯತ್ನ ನಡೆಡುವ ಜವಾಬ್ದಾರಿ ಅವರ ಮೇಲಿದೆ ಎಂದು ತೋರಿಸುವ ಪ್ರಯತ್ನ ಇದಾಗಿದೆ. ಅವರು ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುಂದುವರಿಯಬೇಕೆಂಬುದೂ ಪಕ್ಷದ ಇಚ್ಛೆಯಾಗಿದೆ” ಎಂದು ಪಕ್ಷದ ಮೂಲಗಳು ಹೇಳಿವೆ.

ಕೇಂದ್ರ ನಾಯಕತ್ವವು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ನಿರ್ಧರಿಸದೇ ಇರುವ ಮೂಲಕ ಯಡ್ಡಿಯೂರಪ್ಪ ವಿರುದ್ಧ ಆರೋಪ ಮಾಡಿದ ಕೆಲವರೊಂದಿಗೆ ಸಹಮತ ಹೊಂದಿದೆಯೆಂದೂ ಅರ್ಥೈಸಬಹುದು ಎಂದು ಕೆಲ ಹಿರಿಯ ನಾಯಕರು ಅಭಿಪ್ರಾಯಪಡುತ್ತಿದ್ದಾರೆ.

ಪಕ್ಷ ನಾಯಕತ್ವವು ಯಡ್ಡಿಯೂರಪ್ಪ-ಈಶ್ವರಪ್ಪ ವಿರಸವನ್ನು ಹಾಗೂ ಯಡ್ಡಿಯೂರಪ್ಪ ಹಾಗೂ ಇತರ ಹಿರಿಯ ನಾಯಕರ ನಡುವಣ ಭಿನ್ನಾಭಿಪ್ರಾಯಗಳು ಪ್ರತ್ಯೇಕ ವಿಚಾರಗಳೆಂದು ತಿಳಿಯುತ್ತದೆಯೆಂದೂ ಎರಡೂ ವಿಚಾರಗಳನ್ನು  ಪಕ್ಷಕ್ಕೆ ಧಕ್ಕೆಯಾಗದಂತೆ ಸೌರ್ಹಾದಯುತವಾಗಿ ಪರಿಹರಿಸಲು ಇಚ್ಛಿಸುತ್ತದೆಯೆಂದೂ ಮೂಲಗಳು ಹೇಳಿವೆ.