ಕೊಲೆ ಕೇಸ್ : ಬಿಜೆಪಿ ವಕ್ತಾರ, ಮಾಜಿ ಸಚಿವನ ಪುತ್ರಗೆ ಜೈಲು

ಇಂಪಾಲ್ : ಆರು  ವರ್ಷದ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಬಿಜೆಪಿ ವಕ್ತಾರ ಎನ್ ಬಿರೇನ್ ಸಿಂಗ್ ಅವರ ಪುತ್ರ ಅಜಯಗೆ ಐದು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಹತ್ಯೆಯಾದವನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡುವಂತೆ ಅಜಯ್ ಮತ್ತು ಆತನ ಕುಟುಂಬಕ್ಕೆ ಸೂಚಿಸಲಾಗಿದೆ.

ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಎಂ ಮನೋಜ್ ಕುಮಾರ್ ಸಿಂಗ್ ಈ ತೀರ್ಪನ್ನು ಪ್ರಕಟಿಸುವಾಗ ಸಂತ್ರಸ್ತೆ  ಇರೋಮ್ ರೋಜರ್ ತಾಯಿ ಅಲ್ಲಿದ್ದರು. ತಮ್ಮ ಮಗನ ಕೊಲೆಗೈದಿದ್ದ ಮಾಜಿ ಸಚಿವನ ಪುತ್ರನಿಗೆ ಶಿಕ್ಷೆಯಾಗಿದ್ದಕ್ಕೆ ಆಕೆ ಸಂತೋಷ ವ್ಯಕ್ತಪಡಿಸಿದರು.

2011ರ ಮಾರ್ಚ್ 20ರಂದು ಮಣಿಪುರದಲ್ಲಿ ನಡೆದ ಯಾಹೊಶಾಂಗ್ ಉತ್ಸವದ ವೇಳೆ ಅಜಯ್ ಇರಾಮನನ್ನು ಗುಂಡಿಟ್ಟು ಕೊಂದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಯ್ ಸೇರಿದಂತೆ ಐವರನ್ನು ಪೆÇಲೀಸರು ಬಂಧಿಸಿದ್ದರು. ಆದರೆ ಅಜಯ್ ಬಿಟ್ಟು ಉಳಿದವರನ್ನು ಬಿಡುಗಡೆ ಮಾಡಲಾಗಿತ್ತು.