ಈಶ್ವರಪ್ಪನ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮಕ್ಕೆ ಬಿಜೆಪಿ ಪ್ರಮುSರ ಗೈರು

ಬೆಳಗಾವಿ (ನಂದಗಡ) : ರಾಯಣ್ಣನನ್ನು ನೇಣಿಗೆ ಹಾಕಲಾಗಿದ್ದ ಖಾನಾಪುರ ತಾಲೂಕಿನ ನಂದಗಡದಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ ಮುಂದಾಳತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡಿಗೆ ನಿನ್ನೆ ಅಧಿಕೃತ ಚಾಲನೆ ಸಿಕ್ಕಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಎಚ್ಚರಿಕೆಯ ಕರೆಗಂಟೆಯನ್ವಯ ಬಿಜೆಪಿ ಶಾಸಕರು ಮತ್ತು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಗೈರಾಗಿದ್ದರು.

ರಾಯಣ್ಣ ಬ್ರಿಗೇಡ್ ಚಾಲನೆ ಕಾರ್ಯಕ್ರಮದಲ್ಲಿ 20 ಶಾಸಕರು ಪಾಲ್ಗೊಳ್ಳಲಿದ್ದಾರೆಂದು ಸಂಘಟಕರು ಹೇಳಿಕೊಂಡಿದ್ದರೂ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರ್ಯಾರೂ  ಭಾಗವಹಿಸಿರಲಿಲ್ಲ. ಬದಲಾಗಿ ಎಂಎಲ್‍ಸಿ ಸೋಮಣ್ಣ ಬೇವಿನಮರದ್ ಉಪಸ್ಥಿತರಿದ್ದರು. ಪೋಸ್ಟರುಗಳು ಮತ್ತು ಬ್ಯಾನರುಗಳಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಠಗಳ 10 ಸ್ವಾಮಿಗಳು ಭಾಗವಹಿಸುವುದಾಗಿ ಪ್ರಚಾರ ಮಾಡಲಾಗಿದ್ದರೂ, ಇವರಲ್ಲಿ ಏಳು ಮಂದಿ ಗೈರಾಗಿದ್ದರು.

ವೇದಿಕೆಯಲ್ಲಿ ಕೆಲವಾರು ಮಾಜಿ ಸಚಿವರು, ಶಾಸಕರು ಮತ್ತು ಎಂಎಲ್‍ಸಿಗಳಿದ್ದರು. ಸಭೆಯಲ್ಲಿ ಸುಮಾರು 3,000 ಕಾರ್ಯಕರ್ತರು ಪಾಲ್ಗೊಂಡಿದ್ದರು.

“ಇಷ್ಟಕ್ಕೆ ಬ್ರಿಗೇಡ್ ಚಟುವಟಿಕೆ ಯಾವತ್ತೂ ನಿಲ್ಲದು. ಇದು ಯಾವುದೇ ಪಕ್ಷ ವಿರೋಧ ಅಥವಾ ವೈಕ್ತಿಗತ ವಿರೋಧದ ವೇದಿಕೆಯಲ್ಲ. ನಾನು ದಲಿತರು ಮತ್ತು ಹಿಂದುಳಿದ ವರ್ಗಗಳ ಮಂದಿಯ ಏಳಿಗೆ ಬಯಸಿದ್ದು, ಇದನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಪಕ್ಷವು ನನಗೆ ನೋಟಿಸು ಜಾರಿ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡಲು ಸಮರ್ಥನಿದ್ದೇನೆ;; ಎಂದು ಈಶ್ವರಪ್ಪ ಗುಡುಗಿದರು.

“ದೇವರು ಮತ್ತು ರಕ್ಕಸರ ಮಧ್ಯೆ ಸಮುದ್ರಮಂಥನ ನಡೆದಾಗ ಮೊದಲಿಗೆ ವಿಷ ಬಂದಿತ್ತು. ಖಂಡಿತವಾಗಿಯೂ ಭವಿಷ್ಯದಲ್ಲಿ ಅಮೃತವಾಗಲಿದೆ” ಎಂದು ಈಶ್ವರಪ್ಪ ಹೇಳಿದರು.