ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಅತ್ಯಾಚಾರ ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

ಕಲಬುರ್ಗಿ : ನಾಲ್ಕು ತಿಂಗಳ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಕರಣವೊಂದರ ಆರೋಪಿ ಬಿಜೆಪಿ ನಾಯಕ ವೆಂಕಟೇಶ ಮೌರ್ಯರನ್ನು ಪೆÇಲೀಸರು ಬಂಧಿಸಿದ್ದಾರೆ.

ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಎಸ್ ಸಿ ಮೋರ್ಚಾ ಸದಸ್ಯ ವೆಂಕಟೇಶ ಮೌರ್ಯರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಕುರಿತು ಬಂಧನ ಭೀತಿ ಎದುರಿಸುತ್ತಿದ್ದ ವೆಂಕಟೇಶ್ ಮೌರ್ಯ ತಲೆಮರೆಸಿಕೊಂಡು ತಿರುಗುತ್ತಿದ್ದರು.

ಬಿಜೆಪಿ ಕಾರ್ಯಕಾರಣಿ ಸಭೆಗೆ ವೆಂಕಟೇಶ್ ಮೌರ್ಯಾ ಬರುತ್ತಾರೆಂದು ಖಚಿತ ಮಾಹಿತಿ ಮೇಲೆ ಬೆಂಗಳೂರು ಪೆÇಲೀಸರು ಕಲಬುರ್ಗಿಗೆ ಆಗಮಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.