ಬಿಜೆಪಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ

ಭ್ರಷ್ಟಾಚಾರ ಎಂಬ ಪದಕ್ಕೆ ದುವ್ರ್ಯವಹಾರ ಎಂಬ ಅರ್ಥ ಬರುತ್ತದೆ ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ಇದು ಬೇರೆ ಬೇರೆ ರೀತಿಯಲ್ಲಿ ಉಪಯೋಗವಾಗುತ್ತದೆ ನಮ್ಮ ಪ್ರಧಾನಿಯವರು ಆಗಾಗ್ಗೆ ತಮ್ಮ ಮನ್ ಕೀ ಬಾತ್’ ನಲ್ಲಿ ಹಾಗೂ ದೇಶದ ಹಲವಾರು ಕಡೆ ತಮ್ಮ ಭಾಷಣದಲ್ಲಿ ಭ್ರಷ್ಟಾಚಾರ ತೊಲಗಿಸಿ ಎಂದು ಸಾರಿ ಹೇಳುತ್ತಾರೆ ಅವರಿಗೆ ಈ ವಿಷಯದಲ್ಲಿ ಸಾಥ್ ಕೊಡುವವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಗಿರುತ್ತಾರೆ ಆದರೆ ರಾಜಕೀಯದಲ್ಲಿ ಇಂದು ಆಗುತ್ತಿರುವ ಬೆಳವಣೆಗೆಯನ್ನು ಸೂಕ್ಷ್ಮವಾಗಿ ನೋಡಿದರೆ ನಮ್ಮ ಪ್ರಧಾನಿ ಮತ್ತು ಅಮಿತ್ ಷಾ ಅವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ಗೋಚರವಾಗುತ್ತಿದೆ ಕೇವಲ ಹಣದ ಪ್ರಯೋಗವಲ್ಲದೆ ಹುದ್ದೆಗಳನ್ನು ಕೊಡುವಿಕೆಯ ಪ್ರಯೋಗ ಕೂಡಾ ಧಾರಾಳವಾಗಿ ನಡೆಯುತ್ತಿದೆ ಇತ್ತೀಚೆಗೆ ಮಣಿಪುರ ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಬಹುಮತ ಹೊಂದಿದ ಪಕ್ಷವಾದರೂ ಅಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಯಾವ ರೀತಿ ನಡೆದುಕೊಂಡಿತ್ತು ಎಂಬುದು ನಮಗೆಲ್ಲರಿಗೂ ತಿಳಿದ ವಿಷಯ. ಬಿಜೆಪಿಯವರು ಭಾರತದ ಎಲ್ಲ ರಾಜ್ಯಗಳಲ್ಲಿ ತಮ್ಮದೇ ಆಡಳಿತ ಇರಬೇಕೆಂದು ಪ್ರಯತ್ನಿಸುತ್ತಿರುವುದು ಗೋಚರವಾಗುತ್ತಿದೆ ಆದರೆ ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಮಾರ್ಗಗಳನ್ನು ಅನುಸರಿಸದೆ ವಾಮಮಾರ್ಗ ಅನುಸರಿಸುವುದರಿಂದ ಭ್ರಷ್ಟಾಚಾರವನ್ನು ಪೋಷಿಸಿದಂತಾಗುವುದಿಲ್ಲವೇ

  • ಚಂದ್ರಕಾಂತ್ ಸುವರ್ಣ  ನೀರುಮಾರ್ಗ  ಮಂಗಳೂರು