ಹೇಳೋದು ಸಿದ್ದಾಂತ ಮಾಡೋದು ರಾದ್ಧಾಂತ

ಬಿಜೆಪಿಯಲ್ಲಿ ತಾವು ಶಿಸ್ತಿನ ಪಕ್ಷದ ಸಿಪಾಯಿಗಳು ಎಂದು ಬೀಗುತ್ತಿದ್ದ ಬಿ ಎಸ್ ಯಡ್ಡಿಯೂರಪ್ಪ ಮತ್ತು ಕೆ ಎಸ್ ಈಶ್ವರಪ್ಪನವರ ಬೀದಿ ಜಗಳ ಕಳೆದ ಎರಡು ವಾರಗಳಿಂದ ಮನರಂಜನೆ ಒದಗಿಸುತ್ತಿದೆ. ಈ ಜಗಳದಿಂದ ಇವರು ಮತ್ತೆ ಒಂದಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. `ವ್ಯಕ್ತಿಗಿಂತಲೂ ಪಕ್ಷ ಮುಖ್ಯ, ಪಕ್ಷಕ್ಕಿಂತಲೂ ದೇಶ ಮುಖ್ಯ’ ಎಂದು ಭಾಷಣ ಬಿಗಿಯುವ ಈ ಜನಸಂಘಿಗಳು ಪ್ರತಿಷ್ಠೆಗೆ ಜೋತುಬಿದ್ದು ಬೀದಿ ಕಾಳಗದಲ್ಲಿ ನಿರತರಾಗಿದ್ದಾರೆ.
ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ 150 ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಧಿಕಾರ ಬರುವುದರೊಳಗೆಯೇ ಇಷ್ಟೊಂದು ಕಚ್ಚಾಡುವವರು ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಇವರ ಬೀದಿ ಜಗಳ ಎಷ್ಟು ತಾರಕಕ್ಕೇರುವುದೆಂದು ಊಹಿಸಲು ಅಸಾಧ್ಯ. ರಾಜ್ಯದ ಜನತೆಯನ್ನು ಮೂರ್ಖರೆಂದು ಈ ಅಸಾಮಿಗಳು ತಿಳಿದಿದ್ದಾರೆಯೇ   ಇವರಂಥವರಿಗೂ ಮತ ನೀಡಬೇಕೇ   ಅಷ್ಟೇ ಅಲ್ಲದೆ ಅವರಿಂದಲೇ ಸಂಸ್ಕಾರ ಪಡೆದ ಕಾರ್ಯಕರ್ತರು ಬೀದಿಯಲ್ಲೇ ಮಾರಾಮಾರಿ ಮಾಡಿಕೊಂಡು ತಾವು ನಂಬಿರುವ ದೇಶಭಕ್ತಿಯನ್ನು ಸಾರ್ವಜನಿಕರಿಗೂ ದರ್ಶನ ಮಾಡಿಸಿದ್ದಾರೆ.
ಒಟ್ಟಿನಲ್ಲಿ ಹೇಳೋದು ಸಿದ್ಧಾಂತ, ಮಾಡೋದು ರಾದ್ಧಾಂತ ಎನ್ನುವ ಗಾದೆಯಂತೆ ನಮೋ ಪಡೆಯ ಶಿಷ್ಯರು ನಡೆದುಕೊಳ್ಳುತ್ತಿದ್ದಾರೆ. ಶಿಸ್ತಿನ ಪಾಠ ಹೇಳಬೇಕಾದವರು ಸುಸ್ತಾಗಿದ್ದಾರೆ. ಇನ್ನು ಮುಂದಿನ ಅಸೆಂಬ್ಲಿ ಚುನಾªಣೆಯಲ್ಲಿ ಮತದಾರರೇ ಈ ಕಾರ್ಯವನ್ನು ಮಾಡಲಿರುವುದು ಖಂಡಿತಾ

  • ಕೆ ಅವಿನಾಶ್  ಕುದ್ರೋಳಿ ಮಂಗಳೂರು