ಆತಂಕ ತಂದ ಬಿಜೆಪಿ ಒಳಜಗಳ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಗೇಟ್ ಪಾಸ್ ನೀಡಲು ಚಿಂತನೆ ನಡೆಸುತ್ತಿರುವಾಗ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಜನರ ಕಣ್ಣ ಮುಂದಿರುವುದು ಬಿಜೆಪಿ. ಆದರೆ ಬಿಜೆಪಿಯಾದರೂ ತಟ್ಟೆಯಲ್ಲಿಟ್ಟು ಕೊಡುವ ಗೆಲುವನ್ನು ಕೈ ಚೆಲ್ಲವುದೋ ಎಂಬ ಆತಂಕ ಎದುರಾಗಿದೆ. ಪಕ್ಷದ ಆಂತರಿಕ ಜಗಳವು ಹಿಂದೊಮ್ಮೆ ಅಧಿಕಾರದಿಂದಲೇ ಕಿತ್ತೊಗೆದಿತ್ತು. ಇದೀಗ ಅದೇ ಒಳಜಗಳವನ್ನು ಬಿಜೆಪಿ ಪುನರಾವರ್ತಿಸದಿರಲಿ.

  • ಸುಧಾಕರ ವಿಟ್ಲ