ನಗರಸಭಾಧ್ಯಕ್ಷೆಗೆ ಬಿಜೆಪಿ ಕೌನ್ಸಿಲರಿಂದ ದಿಗ್ಬಂಧನ

ನಗರಸಭೆ ಸದಸ್ಯರ ಹಾಜರಾತಿ ಪುಟ ಹರಿದ ಆರೋಪ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನಗರಸಭೆಯ ಕೌನ್ಸಿಲ್ ಹಾಜರಾತಿ ರಿಜಿಸ್ಟ್ರರ್ ಪುಟವನ್ನು ಹರಿದು ಹಾಕಿರುವುದಾಗಿ ಆರೋಪಿಸಿ ಬಿಜೆಪಿ ಕೌನ್ಸಿಲರುಗಳು ನಗರಸಭಾ ಅಧ್ಯಕ್ಷೆ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಮುಸ್ಲಿಂ ಲೀಗ್ ನೇತೃತ್ವದಲ್ಲಿ ಈ ಹಾಜರಿ ಪುಟವನ್ನು ಹರಿದು ಹಾಕಿರುವುದಾಗಿ ಬಿಜೆಪಿ ಕೌನ್ಸಿಲರುಗಳು  ಅರೋಪಿಸಿದ್ದಾರೆ. ದಿಗ್ಬಂಧನ ನಡೆಸಿದಾಗ ಕೆಲ ಸಮಯ ಚೇಂಬರಿನೊಳಗೆ ಮಾತಿನ ಚಕಮಕಿ ನಡೆದಿದೆ. ಆದರೆ ಬಿಜೆಪಿ ಕೌನ್ಸಿಲರುಗಳ ಆರೋಪವನ್ನು ನಗರ ಸಭಾಧ್ಯಕ್ಷೆ ತಳ್ಳಿ ಹಾಕಿದ್ದಾರೆ. ಈ ಸಂದರ್ಭ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಕೌನ್ಸಿಲರುಗಳು ಉಪಸ್ಥಿತರಿದ್ದರು. ಕೆಲ ದಿನಗಳ ಹಿಂದೆ ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಸಿರುವುದಾಗಿ ಆರೋಪಿಸಿ ನ್ಯಾಶನಲ್ ಲೀಗ್ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.