ಬೈಕ್ ಪರಸ್ಪರ ಡಿಕ್ಕಿ : ಇಬ್ಬರು ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಬೈಕುಗಳೆರಡು ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಸಂಬಂಧ ಬೈಕ್ ಸವಾರನ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಗುವೆದಪಡ್ಪು ಬಳಿಯ ಚತ್ರ ಎಂಬಲ್ಲಿ ಅಪಘಾತ ಉಂಟಾಗಿತ್ತು. ಬೈಕ್ ಸವಾರ ವರ್ಕಾಡಿ ನಿವಾಸಿ ಕ್ಲಿಪೆÇೀಡ್ ಡಿಸೋಜ (21) ಹಾಗೂ ಹಿಂಬದಿ ಸವಾರ ಕೊಡ್ಲಮೊಗರು ನಿವಾಸಿ ಬಾಬು (37) ಎಂಬವರು ಗಾಯಗೊಂಡಿದ್ದಾರೆ. ಇವರಿಬ್ಬರು ಕಾಂಕ್ರೀಟ್ ಕಾರ್ಮಿಕರಾಗಿದ್ದು, ಕೆಲಸಕ್ಕೆ ತೆರಳುತ್ತಿದ್ದಾಗ ಚತ್ರ ಎಂಬಲ್ಲಿ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಬೈಕ್ ಸವಾರ ಕ್ಲಿಪೆÇೀಡ್ ಡಿಸೋಜಾರ ದೂರಿನಂತೆ ಇನ್ನೊಂದು ಬೈಕ್ ಸವಾರನ ವಿರುದ್ಧ ಕೇಸು ದಾಖಲಿಸಲಾಗಿದೆ.