ಅಂಗಡಿಗೆ ನುಗ್ಗಿದ ಬೈಕ್

ಸಾಂದರ್ಭಿಕ ಚಿತ್ರ

ಮುಲ್ಕಿ : ಅತಿಕಾರಿಬೆಟ್ಟು ಗ್ರಾಮದ ಪಂಜಿನಡ್ಕ ಎಂಬಲ್ಲಿ ಅಂಗಡಿಗೆ ಬೈಕೊಂದು ನುಗ್ಗಿ ಅವಾಂತರ ಸೃಷ್ಟಿಸಿದ ಘಟನೆ ತಡವಾಗಿ ವರದಿಯಾಗಿದೆ. ಪಂಜಿನಡ್ಕ ಜಂಕ್ಷನ್ ಬಳಿಯ ಬಳಕುಂಜೆ ರಸ್ತೆಯಲ್ಲಿರುವ ಗಣೇಶ್ ಕಾಮತ್ ಎಂಬವರ ತರಕಾರಿ ಅಂಗಡಿಗೆ ಇದಕ್ಕಿದಂತೆ ರಸ್ತೆಯಲ್ಲಿ ಕಲಿಯುತ್ತಿದ್ದ ಬೈಕೊಂದು ಒಳ ನುಗ್ಗಿದೆ. ಬೈಕ್ ನುಗ್ಗಿದ್ದರಿಂದ ಅಂಗಡಿಗೆ ಸ್ವಲ್ಪ ಹಾನಿಯಾಗಿದೆ. ಸವಾರ ಮೈಲೊಟ್ಟು ನಿವಾಸಿ ಯಾವುದೇ ಗಾಯಗಳಿಲ್ಲದೆ ಪವಾಡಸದೃಶ ಪಾರಾಗಿದ್ದಾರೆ.