ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯ

ವಿಟ್ಲ : ಜಲ್ಲಿ ಹುಡಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಅಡ್ಯನಡ್ಕ ಸಮೀಪ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

11vittla4

ಮೂಡಂಬೈಲು ಸರವು ನಿವಾಸಿ ಅಕ್ಷಯ್ ಕುಮಾರ್(21) ತನ್ನ ಬೈಕಿನಲ್ಲಿ ಸಾರಡ್ಕ ಕಡೆಯಿಂದ ಅಡ್ಯನಡ್ಕಕ್ಕೆ ಬರುತ್ತಿದ್ದ ಸಂದರ್ಭ ಮಿತಿಮೀರಿದ ವೇಗದಲ್ಲಿ ಬರುತ್ತಿದ್ದ ಜಲ್ಲಿ ಹುಡಿ ಸಾಗಾಟದ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.