ಕೊಲೆಕಾಡಿ ಬಳಿ ಬೈಕ್ ಸ್ಕಿಡ್, ಸವಾರ ಗಂಭೀರ

ಸಾಂದರ್ಭಿಕ ಚಿತ್ರ

ಮುಲ್ಕಿ : ಇಲ್ಲಿಗೆ ಸಮೀಪದ ಕೊಲೆಕಾಡಿ ಬಳಿ ಬೈಕು ಸ್ಕಿಡ್ ಆಗಿ ಸವಾರ ಪಂಜಿನಡ್ಕ ಬಳಿಯ ನಿವಾಸಿ ಹರೀಶ್ ಕುಮಾರ್ ಹೆಗ್ಡೆ (36) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.  ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.     ಗಾಯಾಳು ಹರೀಶ್ ಮಂಗಳೂರಿನ ಬಂದರನಲ್ಲಿ ಹೋಟೇಲು ನಡೆಸುತ್ತಿದ್ದು ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸು ಬೈಕಿನಲ್ಲಿ ಬರುತ್ತಿದ್ದ ವೇಳೆ ಬೈಕು ಸ್ಕಿಡ್ ಆಗಿದೆ. ಸ್ಥಳದಲ್ಲಿ ಬಾರೀ ಶಬ್ದ ಆಗಿರುವುದನ್ನು ಕಂಡು ಕೂಡಲೇ ಸ್ಥಳೀಯರಾದ ಡಾ ಚಂದ್ರಶೇಖರ್ ಮತ್ತಿತರರು ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹರೀಶ್ ಅವರ ತಲೆಗೆ ಗಂಭೀರ ಗಾಯಗಳಾಗಿದೆ. ಕಳೆದ ದಿನದ ಹಿಂದೆ ಹರೀಶ್ ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದರು.