ರಿಕ್ಷಾ ಬೈಕ್ ಡಿಕ್ಕಿ , ಗಾಯ

ಸಾಂದರ್ಭಿಕ ಚಿತ್ರ

ಕಾರ್ಕಳ : ರಿಕ್ಷಾ ಚಾಲಕ ಮುಂದಿನಿಂದ ಹೋಗುತ್ತಿದ್ದ ಬೈಕನ್ನು ಓವರಟೇಕ್ ಮಾಡುವ ಭರದಲ್ಲಿ ಬೈಕಿಗೆ ತಗುಲಿದ ಪರಿಣಾಮ ಬೈಕ್ ಸವಾರ ಹಾಗೂ ಸಹಸವಾರ ಬಿದ್ದು ಗಾಯಗೊಂಡ ಘಟನೆ ಹೆಬ್ರಿ ಬಳಿ ನಡೆದಿದೆ.

ಹೆಬ್ರಿ ಬಳಿ ಮಠದಬೆಟ್ಟು ಕಲ್ಲಿಲು ನಿವಾಸಿ ಭಾಸ್ಕರ ಶೆಟ್ಟಿ ಹಾಗೂ ರತ್ನಾಕರ ಹೆಗ್ಡೆ ಎಂಬವರು ಬೈಕಿನಲ್ಲಿ ಸೋಮವಾರ ರಾತ್ರಿ ಹೆಬ್ರಿ ಕಡೆಗೆ ಹೋಗುತ್ತಿದ್ದಾಗ ಮಡಾಮಕ್ಕಿ ಕಡೆಯಿಂದ ರಿಕ್ಷಾ ಚಾಲಕ ಪ್ರದೀಪ್ ಎಂಬಾತ ಅತ್ಯಂತ ವೇಗ ಹಾಗೂ ನಿರ್ಲಕ್ಷ್ಯತನದಿಂದ ರತ್ನಾಕರ್ ಹೆಗ್ಡೆ ಚಲಾಯಿಸುತ್ತಿದ್ದ ಬೈಕನ್ನು ಓವರಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ರಿಕ್ಷಾ ಬೈಕಿಗೆ ಡಿಕ್ಕಿಯಾಗಿದೆ. ಅಪಘಾತದ ಬಳಿಕ ರಿಕ್ಷಾ ಚಾಲಕ ಪ್ರದೀಪ್ ರಿಕ್ಷಾ ನಿಲ್ಲಿಸದೇ ಹೋಗಿದ್ದು, ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.