ಸ್ಕೂಟರಿನಲ್ಲಿದ್ದ ಯುವತಿಯರ ಬ್ಯಾಗ್ ಕಸಿದು ಪರಾರಿಯಾದ ಬೈಕ್ ಸವಾರರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ಕೂಟರಿನಲ್ಲಿ ತೆರಳುತ್ತಿದ್ದ ಯುವತಿಯರು ಸೀಟಿನ ಮಧ್ಯಭಾಗದಲ್ಲಿ ಇರಿಸಿದ್ದ ಬ್ಯಾಗನ್ನು  ಬೈಕಿನಲ್ಲಿ ಬಂದ ಮೂವರು ಯುವಕರು ಕಸಿದು ಪರಾರಿಯಾದ ಘಟನೆ ಯೆಯ್ಯಾಡಿ ಕಟ್ಟೆ ಬಳಿ ನಡೆದಿದೆ.

ಇಬ್ಬರು ಯುವತಿಯರು ಗುರುವಾರ ರಾತ್ರಿ 8.18ಕ್ಕೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದರು.  ಈ ವೇಳೆ ಅವರು ತಮ್ಮ ವ್ಯಾನಿಟಿ ಬ್ಯಾಗನ್ನು ಸೀಟಿನ ಮಧ್ಯಭಾಗದಲ್ಲಿ ಇರಿಸಿದ್ದರು. ಇವರನ್ನು ಫಾಲೋ ಮಾಡಿಕೊಂಡೇ ಒಂದೇ ಬೈಕಿನಲ್ಲಿ ಬಂದಿದ್ದ ಮೂವರು ಯುವಕರು ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಬ್ಯಾಗ್‍ನಲ್ಲಿ ಮೊಬೈಲ್, ಎಟಿಎಂ ಕಾರ್ಡ್, ನಗದು ಹಣ ಇತ್ತು ಎನ್ನಲಾಗಿದೆ. ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.