ಬೈಕಿಗೆ ಟ್ಯಾಂಕರ್ ಡಿಕ್ಕಿ : ಸವಾರ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಟ್ಯಾಂಕರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸುರತ್ಕಲ್ ನಿವಾಸಿ ಸದಾನಂದ ಶೆಟ್ಟಿ (42) ಸಾವನ್ನಪ್ಪಿದ್ದಾರೆ. ನಗರದ ಎ ಜೆ ಆಸ್ಪತ್ರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಈ ಘಟನೆ ಸಂಭವಿಸಿದೆ.

ಸುರತ್ಕಲ್ಲಿನಿಂದ ಕೆಪಿಟಿ ಕಡೆಗೆ ಆಗಮಿಸುತ್ತಿದ್ದ ಸದಾನಂದ ಶೆಟ್ಟಿ ಅವರ ಹಿಂಭಾಗದಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸದಾನಂದರಿಗೆ ಗಂಭೀರ ಏಟು ಬಿದ್ದಿತ್ತು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.