ಜೀಪು ಡಿಕ್ಕಿ, ಬೈಕ್ ಸವಾರ ಸ್ಪಾಟ್ ಡೆತ್

ಉಪ್ಪಿನಂಗಡಿ : ಇಲ್ಲಿನ ಪೆÇಲೀಸ್ ಠಾಣಾ ವ್ಯಾತ್ಪಿಯ  ನೆಲ್ಯಾಡಿ ಸಮೀಪದ  ಮಣ್ಣಗುಂಡಿ ಎಂಬಲ್ಲಿ ಜೀಪೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಶಿರಾಡಿ ಗ್ರಾಮದ ನಿವಾಸಿ  ಪುರುಷೋತ್ತಮ ಗೌಡ (36) ಎಂಬವರು ಸ್ಥಳದಲ್ಲೇ ಮೃತಪಟ್ಟು, ಜೀಪಿನಲ್ಲಿದ್ದ  ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಶಿರಾಡಿ ಗ್ರಾಮದ ಕಳಪ್ಪಾರು ಬಳಿಯ ಕಡಂಬೂರು ನಿವಾಸಿ ಶಿವಣ್ಣ ಗೌಡ ಎಂಬವರ ಮಗನಾದ  ಪುರುಷೋತ್ತಮ ಗೌಡ ನೆಲ್ಯಾಡಿಯಿಂದ ಶಿರಾಡಿಗೆ  ಬೈಕಿನಲ್ಲಿ ಹೋಗುತ್ತಿದ್ದಾಗ ನೆಲ್ಯಾಡಿಯತ್ತ ಬರುತ್ತಿದ್ದ ಜೀಪು ಡಿಕ್ಕಿ ಹೊಡೆಯಿತು.