ಬೈಕ್ ಓಡಿಸುವಾಗ ದನ ಅಡ್ಡ ಬಂದು ಚರಂಡಿಗೆ ಬಿದ್ದ ಸವಾರ ಗಂಭೀರ

ಸಾಂದರ್ಭಿಕ ಚಿತ್ರ

 

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ರಾತ್ರಿ ವೇಳೆ ಬೈಕಿನಲ್ಲಿ ಹೋಗುತ್ತಿದ್ದಾಗ ದನವೊಂದು ಅಡ್ಡ ಬಂದ ಪರಿಣಾಮ ಬೈಕ್ ಸವಾರ ಬಿದ್ದು ಗಂಭೀರ ಗಾಯಗೊಂಡ ಘಟನೆ ಹೆಬ್ರಿ ಸಮೀಪದ ಕುಚ್ಚೂರು ಮಠದಬೆಟ್ಟು ಬಸ್ ನಿಲ್ದಾಣದ ಬಳಿ ನಡೆದಿದೆ. ಸುರೇಶ್ ಹೆಗ್ಡೆ ಎಂಬವರು ರಾತ್ರಿ 11 ಗಂಟೆ ವೇಳೆಗೆ ಹೆಬ್ರಿ ಕಡೆಯಿಂದ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಮಠದಬೆಟ್ಟು ಎಂಬಲ್ಲಿನ ಬಸ್ ನಿಲ್ದಾಣದ ಬಳಿ ದನವೊಂದು ರಸ್ತೆಗೆ ಓಡಿಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಸುರೇಶ್ ಹೆಗ್ಡೆ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ