ಬೈಕ್ ಕಳ್ಳ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೈಕುಗಳನ್ನು ಕಳವು ಮಾಡಿದ್ದಲ್ಲದೇ ಅದನ್ನು ಮಾರಾಟ ಮಾಡಿ ಹಣಗಳಿಸಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಡಿಸಿಐಬಿ ಪೊಲೀಸರ ತಂಡ ದಾಳಿ ನಡೆಸಿ ಬಂಧಿಸಿದೆ.

ಸುರತ್ಕಲ್ ಕಾಟಿಪಳ್ಳ ನಿವಾಸಿ ಹಂಝ (20) ಬಂಧಿತ. ಸುರತ್ಕಲ್ ನಿವಾಸಿ ಸಿದ್ಧೀಕ್ ಈತನ ಕೃತ್ಯಗಳಿಗೆ ಸಾಥ್ ನೀಡುತ್ತಿದ್ದು, ಆತನೀಗ ಪರಾರಿಯಾಗಿದ್ದಾನೆ.