ಬುಲೆಟ್ ಕಳವು : ಒಬ್ಬ ಸೆರೆ

ಬಂಧಿತ ಅಕ್ಬರ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬುಲೆಟ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಂಜೇಶ್ವರ ಪೆÇಲೀಸರು ಸೆರೆಹಿಡಿದಿದ್ದಾರೆ.

ವಶಪಡಿಸಿಕೊಂಡ ಬುಲೆಟ್
ವಶಪಡಿಸಿಕೊಂಡ ಬುಲೆಟ್

ಆಲಂಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮುಹಮ್ಮದ್ ಅಕ್ಬರ್ (25) ಸೆರೆಯಾದ ಆರೋಪಿ. ಪ್ರಕರಣದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸುತ್ತಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

ವಾಮಂಜೂರು ಚೆಕ್ ಪೋಸ್ಟ್ ಡಿಕ್ಲರೇಶನ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಭೋವಿಕ್ಕಾನ ನಿವಾಸಿಯು ತಾನು ವಾಸಿಸುವ ಫ್ಲಾಟ್ ಅಂಗಣದಲ್ಲಿ ನಿಲ್ಲಿಸಿದ್ದ ಹೊಸ ಬುಲೆಟನ್ನು ಜನವರಿ 1ರಂದು ಕಳವು ಗೈಯಲಾಗಿತ್ತು. ಇದೀಗ ಪ್ರಕರಣದ ಒಬ್ಬ ಆರೋಪಿಯನ್ನು ಮಂಜೇಶ್ವರ ಪೆÇಲೀಸರು ಸೆರೆ ಹಿಡಿದಿದ್ದಾರೆ.