ಯುವ ಜೋಡಿಯಿದ್ದ ಬೈಕ್ ಕೋಲ್ನಾಡು ಬಳಿ ಹೊಂಡಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಭಾರತ್ ಬೆಂಜ್ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ 9.30ಕ್ಕೆ ಉಡುಪಿ ಕಡೆಗೆ ಹೋಗುತ್ತಿದ್ದ ಯುವಕ, ಯುವತಿಯಿದ್ದ ಬೈಕ್ ಕೋಲ್ನಾಡು ತಲುಪುತ್ತಿದ್ದಂತೆ ರಾಂಗ್ ಸೈಡಿನಿಂದ ಬರುತ್ತಿದ್ದ ವಾಹನದ ನಡುವೆ ಅಪಘಾತ ತಪ್ಪಿಸಿ ಬೈಕು ಸಮೇತ ಇಬ್ಬರು ಹೊಂಡಕ್ಕುರುಳಿದ್ದಾರೆ. ಯುವಕನ ಹೆಸರು ವಿವನ್ ಎಂದು ತಿಳಿದುಬಂದಿದೆ. ಅಪಘಾತದಿಂದ ಇಬ್ಬರೂ ಗಾಯಗೊಂಡು ಗಾಬರಿಯಾಗಿದ್ದರು. ಆದರೆ ಇತರೆ ವಾಹನ ಚಾಲಕರ ಪ್ರಕಾರ ಇಬ್ಬರೂ ಬೈಕಿನಲ್ಲಿ ಅಶ್ಲೀಲವಾಗಿ ವರ್ತಿಸಿಕೊಂಡು ಬರುವಾಗ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಕೆಲ ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿತ್ತು.