ಮರಕ್ಕೆ ಡಿಕ್ಕಿ : ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಹುಲೇಕಲ್ ರಸ್ತೆಯಲ್ಲಿ ಮಂಗಳವಾರ ಸಂಜೆ ಎದುರಿನ ವಾಹನಕ್ಕೆ ಸೈಡ್ ಕೊಡಲು ರಸ್ತೆಯಿಂದ ಕೆಳಗೆ ಇಳಿದ ಸವಾರ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗಣೇಶಫಾಲ್ಸ್ ವೀಕ್ಷಿಸಿ ವಾಪಸ್ ಶಿರಸಿ ಮೂಲಕ ತಮ್ಮ ಊರಾದ ಶಿರಾಳಕೊಪ್ಪಕ್ಕೆ ಹೋಗಲು ಬರುತ್ತಿದ್ದ ಬೈಕ್ ಸವಾರ ಮನೋಹರ ಕುಬ್ಸದ ಮೃತಪಟ್ಟಿದ್ದು, ಸಹಸವಾರ ದಿನೇಶ ಮಹಾದೇವಪ್ಪ ಗಂಭೀರ ಗಾಯಗೊಂಡಿದ್ದಾರೆ. 108 ವಾಹನದಲ್ಲಿ ಇಬ್ಬರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ನಂತರ ಟಿಎಸ್ಸೆಸ್ ಆಸ್ಪತ್ರೆಗೂ ಒಯ್ಯಲಾಗಿದೆ. ದಿನೇಶನನ್ನು ಹುಬ್ಬಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.