ನಾರಾಯಣ್ ಚಿತ್ರಕ್ಕೆ ಬಿಗ್ ಬಾಸ್ ಶ್ರುತಿ ನಾಯಕಿ

ಈ `ಬಿಗ್ ಬಾಸ್’ ರಿಯಾಲಿಟಿ ಶೋದಿಂದಾಗಿ ಕೆಲವರು ಈಗ ಸಿನಿಮಾದಲ್ಲಿ ನಟಿಸಲೂ ಆಫರ್ ಪಡೆಯುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಶೋದಲ್ಲಿ ಭಾಗವಹಿಸಿದ್ದ ಶ್ರುತಿ ಪ್ರಕಾಶಗೂ ಸ್ಯಾಂಡಲ್ವುಡ್ಡಿನ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತಿದೆ ಎನುವ ಸುದ್ದಿ ಬಂದಿದೆ.  ಮೂಲಗಳ ಪ್ರಕಾರ ಕಲಾ ಸಾಮ್ರಾಟ್ ಬಿರುದಾಂಕಿತ ಎಸ್.ನಾರಾಯಣ್ ನಿರ್ದೇಶಿಸಲಿರುವ ಚಿತ್ರಕ್ಕೆ ಶ್ರುತಿ ನಾಯಕಿಯಾಗುತ್ತಿದ್ದಾಳೆ ಎನ್ನುವ ವಿಷಯ ಗಾಂಧಿನಗರದಿಂದ ಕೇಳಿಬಂದಿದೆ. ಗಾಯಕಿಯೂ ಆಗಿರುವ ಶ್ರುತಿಗೆ ಅಭಿನಯದಲ್ಲೂ ಆಸಕ್ತಿ ಇದೆ. ನೋಡಲೂ ಸುಂದರಳಾಗಿರುವ ಶ್ರುತಿ ಡ್ಯಾನ್ಸ್ ಕೂಡಾ ಚೆನ್ನಾಗಿ ಮಾಡುತ್ತಾಳೆ. ಎಸ್ ನಾರಾಯಣ್ ನಿರ್ದೇಶನ ಮಾಡಲಿರುವ ಹೊಸ ಚಿತ್ರದಲ್ಲಿ ಅವರ ಮಗ ಪಂಕಜ್ ನಾಯಕನಾಗಿದ್ದು ಅದರಲ್ಲಿ ನಾಯಕಿಯಾಗಿ ಶ್ರುತಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಧಿಕೃತ ಪ್ರಕಟಣೆ ಮಾತ್ರ ಇನ್ನಷ್ಟೇ ಹೊರಬೀಳಬೇಕಿದೆ.

LEAVE A REPLY