ಕೊರಗಜ್ಜನಿಗೆ ಅವಹೇಳನ ಸಮಾಜದ ಭಾವನೆ ಕೆರಳಿಸುವ ಹುನ್ನಾರದ ಭಾಗ

ಕೊರಗ ಸಮುದಾಯ ಕರಾವಳಿ ಕರ್ನಾಟಕದ ಮೂಲ ಜನಾಂಗವಾಗಿದ್ದು, ಶತಮಾನಗಳಿಂದ ಶೋಷಣೆಗೆ ಒಳಪಟ್ಟಿರುತ್ತದೆ. ಅಜಲು, ಚಾಕರಿ, ಅಸ್ಪøಶ್ಯತೆಗಳಿಂದ ಕೆಂಗೆಟ್ಟು ತೀರಾ ಅಳಿವಿನ ಅಂಚಿನಲ್ಲಿರುವ ನಮ್ಮ ಸಮುದಾಯದ ಮೇಲೆ ಇತ್ತೀಚೆಗೆ ನಮ್ಮ ನಂಬಿಕೆ, ಧಾರ್ಮಿಕತೆಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಸಾಂಸ್ಕøತಿಕ ದಾಳಿಯು ನಡೆಯುತ್ತಿದೆ. ಅವುಗಳಲ್ಲಿ ಕೊರಗ ವೇಷ ಹಾಕುವುದು, ಏಳು ಕೊರೊಪೊಲುಗಳ ಕೋಲ ಎಂಬ ರೀತಿಯಲ್ಲಿ ಸಮುದಾಯದ ಮಹಿಳೆಯರನ್ನು ಅವಮಾನಿಸುವುದು ಇತ್ಯಾದಿಗಳು ಅದರ ಮುಂದುವರಿದ ಭಾಗವೆಂಬಂತೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದ ಕುಲದೈವ, ಸಾಂಸ್ಕøತಿಕ ಪುರುಷನಾಗಿ ಅರಾಧಿಸಲ್ಪಡುವ ಕೊರಗಜ್ಜನನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ಕಿನಲ್ಲಿ ತೀರಾ ಕೀಳು ಮಟ್ಟದ ಭಾಷೆಯಲ್ಲಿ ಸಂಬೋಧಿಸಿ ಆಂಜೆಲ್ ನಯನು ಪ್ರಜ್ವಲ್ ಎನ್ನುವ ವ್ಯಕ್ತಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದು ನಮ್ಮ ಇಡೀ ಸಮುದಾಯದ ನಂಬಿಕೆ ಆಚಾರ ವಿಚಾರ ಘನತೆಯ ಮೇಲೆ ದಾಳಿ ಮಾಡುತ್ತಿರುವ ವಿದ್ಯಮಾನವು ನಡೆಯುತ್ತಿದೆ ಈ ಬಗ್ಗೆ ತಾವುಗಳು ಸೂಕ್ತ ರೀತಿ ತನಿಖೆ ನಡೆಸಿ ತಪ್ಪಿತಸ್ಥ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ ಅದರಂತೆ ಕೂಡಲೇ ಫೇಸ್ಬುಕ್ ಖಾತೆಯನ್ನು ನಿರ್ಬಂಧಿಸುವರೇ ತಮ್ಮ ವಿನಂತಿ

  • ಕೆ ರಮೇಶ  ಅಧ್ಯಕ್ಷರು ಕೊರಗ ಅಭಿವೃದ್ಧಿ ಸಂಘಗಳ
    ಒಕ್ಕೂಟ (ರಿ) ಕರ್ನಾಟಕ-ಕೇರಳ ರಾಜ್ಯ