ಮನೆಯಿಂದ ಕಳವಿಗೆ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಿಜೆಪಿ ಜಿಲ್ಲಾಧ್ಯಕ್ಷ ಕೆ ಶ್ರೀಕಾಂತರ ಸಹೋದರಿ ಜಯಲಕ್ಷ್ಮೀ ಅವರ ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಮನೆಯಿಂದ ಕಳವು ಯತ್ನ ನಡೆದಿದೆ.

ಜಯಲಕ್ಷ್ಮೀ, ಪತಿ ಮೋಹನ ಬಳ್ಳಕ್ಕುರಾಯ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ತಿಂಗಳಿಗೊಮ್ಮೆ ಊರಿಗೆ ಬರುತ್ತಾರೆ. ಅದರಂತೆ ಗುರುವಾರ ಮುಂಜಾನೆ ಮನೆಗೆ ತಲುಪಿದಾಗ ಮನೆಯ ಹಿಂಭಾಗದ ಕಿಟಕಿ ಮುರಿದು ಒಳನುಗ್ಗಿ ಕಳವು ಯತ್ನ ಮಾಡಿದ್ದು ಕಂಡುಬಂತು. ಈ ಮನೆಗೆ ಈ ಮೊದಲು ಕಳ್ಳರು ಎರಡು ಬಾರಿ ನುಗ್ಗಿದ್ದರು. 15 ದಿನಗಳ ಹಿಂದೆ ಮನೆಗೆ ನುಗ್ಗಿ ಕಂಚಿನ ಉರುಳಿ, ಬಾಣಲೆ, ಕುಕ್ಕರ್ ಸಹಿತ ಹಲವು ಗೃಹೋಪಯೋಗಿ ಸಾಮಗ್ರಿಗಳನ್ನು ಕಳವು ಮಾಡಲಾಗಿತ್ತು. ವರ್ಷದ ಹಿಂದೆಯೂ ಇದೆ ರೀತಿ ಮನೆಯಿಂದ ಕಳವು ಯತ್ನ ನಡೆದಿತ್ತು.

LEAVE A REPLY