ಕಸ ವಿಲೇ ಕಾರ್ಮಿಕನ ಕೊಲೆಗೆ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಲೇಡಿಹಿಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಲಗಿದ್ದ ಪಾಲಿಕೆಯ ಕಸ ವಿಲೇವರಿ ಮಾಡುವ ಗುತ್ತಿಗೆ ಕಾರ್ಮಿಕ ಜಯೇಂದ್ರ (30) ಎಂಬಾತಗೆ ಅಪರಿಚಿತರು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ದುಷ್ಕರ್ಮಿಗಳ ಹಲ್ಲೆಗೆ ಗಂಭೀರ ಗಾಯಗೊಂಡಿರುವ ಜಯೇಂದ್ರರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರಗ ಸಮುದಾಯಕ್ಕೆ ಸೇರಿದ ಇವರು ಬಿಕರ್ನಕಟ್ಟೆ ನಿವಾಸಿ. ವಿಪರೀತ ಅಮಲುಪದಾರ್ಥ ದಾಸರಾಗಿದ್ದ ಇವರು ಆರೋಗ್ಯ ಕೇಂದ್ರದ ಆವರಣದಲ್ಲಿಯೇ ಮಲಗುತ್ತಿದ್ದರೆನ್ನಲಾಗಿದೆ.

ಹಲ್ಲೆಗೊಳಗಾಗಿ ಬಿದ್ದುಕೊಂಡಿದ್ದ ಇವರನ್ನು ಕಂಡ ಶೇಖರ ಮತ್ತು ಮುಕೇಶ್ ಎಂಬವರು ಇವರು ಸಾವನ್ನಪ್ಪಿದ್ದಾರೆ ಎಂದು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಬಂದು ನೋಡಿದಾಗ ಜೀವಂತವಿರುವುದು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.