ಎಡಪದವು ನೀರು ಪೂರೈಕೆಯಲ್ಲಿ ತಾರತಮ್ಯ

ಎಡಪದವು ಪಾಡ್ಯಾರು ಎಂಬಲ್ಲಿ ಪಂಚಾಯತ್ ಮೂಲಕ ಸಂಪರ್ಕ ಪಡೆದ ನಲ್ಲಿ ನೀರಿನ ಪೂರೈಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ
ಇಲ್ಲಿ 2 ದಿನಗಳಿಗೊಮ್ಮೆ ನೀರು ಬರುತ್ತಿದ್ದು, ಪಂಪ್ ಆಪರೇಟರ್ ಕೆಲವು ಮನೆಗಳಿಗೆ ದಿನಾ ನೀರು ಪೂರೈಸುತ್ತಿದ್ದಾನೆ ಕೆಲವು ಮನೆಗಳಲ್ಲಿ ಎರಡೆರಡು ಸಂಪರ್ಕ ನೀಡಿ ಅವರಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ಅನಧಿಕೃತವಾಗಿ ಅಂಡರಗ್ರೌಂಡ್ ಟ್ಯಾಂಕ್ ನಿರ್ಮಿಸಿದ್ದಾರೆ. ಅಂಥವರಿಗೆ ಕೂಡಾ ದಿನಾ ನೀರು ಪೂರೈಕೆ ಮಾಡಲಾಗುತ್ತಿದೆ. ವಾರದಲ್ಲಿ ಕೇವಲ 3 ದಿನ ಪರಿಪಾಠ ಇರುವ ಈ ವಾರ್ಡಿನಲ್ಲಿ ಪಂಚಾಯತ ಸದಸ್ಯರ ಮನೆಗಳಿಗೆ, ಪಂಚಾಯತ ನೌಕರರ ಮನೆಗೆ ದಿನಾ ನೀರು ಪೂರೈಕೆಯಾಗುತ್ತಿದೆ. ಕೆಲವು ಮನೆಯವರಿಗೆ ಟ್ಯಾಂಕುಗಳು ತುಂಬಿ ತುಳುಕುವಷ್ಟು ನೀರು ಬಿಡುವ ಈ ಆಪರೇಟರ್ ಕೆಲವು ಮನೆಗಳಿಗೆ ನೀರೇ ಪೂರೈಕೆ ಮಾಡುತ್ತಿಲ್ಲ. ಈ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಟಾಟಾ, ಬಿರ್ಲಾರಿಗೆ ಇಲ್ಲದ ಅಹಂಕಾರ ಇಲ್ಲಿನ ನೀರು ಬಿಡುವ ಆಪರೇಟರಗೆ ಇದೆ
ಪಂಚಾಯತ್ ಸದಸ್ಯರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಇವರಿಗೆ ಸರಿಯಾದ ಬುದ್ಧಿ ಕಲಿಸಲು ಕ್ಷೇತ್ರದ ಮತದಾರರು ಸಿದ್ಧರಾಗಿದ್ದಾರೆ. ತಿಂಗಳು ಆಗುತ್ತಿದ್ದಂತೆ ಸರಿಯಾಗಿ ಬಿಲ್ ಪಡೆಯುವವರು ಅಷ್ಟೇ ಪ್ರಾಮಾಣಿಕವಾಗಿ ನೀರು ಕೂಡ ಬಿಡಬೇಕಲ್ಲ. ಇಲ್ಲಿನ ಪಂಚಾಯತ ನೀರು ಸರಿಯಾಗಿ ಪೂರೈಕೆ ಮಾಡುತ್ತಿಲ್ಲವೆಂದು ಇಲ್ಲಿನ ಜನರ ಗೋಳು
ಮತ್ತೆ ಇನ್ನೇನು ಒಂದು ವರ್ಷದೊಳಗೆ ಅಸೆಂಬ್ಲಿ ಚುನಾವಣೆ ಬೇರೆ ನಡೆಯಲಿಕ್ಕಿದೆ. ಪ್ರಜ್ಞಾವಂತ ಮತದಾರರು ಎಚ್ಚೆತ್ತು ಇಲ್ಲಿ ತೂಕಡಿಸುತ್ತಿರುವ ಪಂಚಾಯತ ಸದಸ್ಯರಿಗೆ ಬುದ್ಧಿ ಕಲಿಸಬೇಕಿದೆ. ಸಮರ್ಪಕ ನೀರು ಪೂರೈಕೆಯಲ್ಲಿ ಆಗುತ್ತಿರುವ ತಾರತಮ್ಯ ಮಾಡುತ್ತಿರುವ ಪಂಪ್ ಅಪರೇಟರುಗಳನ್ನು ಬದಲಾಯಿಸುವ ಅಗತ್ಯವಿದೆ. ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳಲಿ

  • ಬಿ ಎಸ್ ಎಡಪದವು   ಮಂಗಳೂರು