ಭುವನೇಂದ್ರ ಶಾಲೆ ಅಟೆಂಡರ್ ನಾಪತ್ತೆ

ಸಾಂದರ್ಭಿಕ ಚಿತ್ರ

ಕಾರ್ಕಳ : ಇಲ್ಲಿನÀ ಭುವನೇಂದ್ರ ರೆಸಿಡೆನ್ಸಿ ಶಾಲೆಯ ಅಟೆಂಡರ್ ಸುರೇಂದ್ರ ನಾಯಕ್ (32) ಎಂಬವರು ಕಳೆದ ಶನಿವಾರದಂದು ಶಾಲೆಗೆ ಹೋದವರು ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.

ಬಜಗೋಳಿ ನಿವಾಸಿಯಾಗಿರುವ ಸುರೇಂದ್ರ ನಾಯಕ್ ಪ್ರತಿದಿನ ಬೈಕಿನಲ್ಲಿ ಮನೆಯಿಂದ ಶಾಲೆಗೆ ಬಂದುಹೋಗುತ್ತಿದ್ದು ಶನಿವಾರ ಮನೆಯಿಂದ ಶಾಲೆಗೆ ಹೋದವರು ಮರಳಿ ಮನೆಗೆ ಬಂದಿಲ್ಲ.  ಇವರ ಬೈಕ್ ಕೂಡಾ ಪತ್ತೆಯಾಗಿಲ್ಲ. ಅಲ್ಲದೇ ಮೊಬೈಲ್ ಕೂಡಾ ಸ್ವಿಚ್ಡ್ ಆಫ್ ಆಗಿದೆ. ಇವರಿಗೆ ಕಳೆದ 6 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.