ಹೊಸಹುಡುಗರ ಜೊತೆ ಭಟ್ಟರ ಸಿನಿಮಾ

`ಮುಗುಳುನಗೆ’ಯ ನಂತರ ಯೋಗರಾಜ ಭಟ್ಟರು ಯಾವ ಚಿತ್ರ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೀಗ ತೆರೆ ಬಿದ್ದಿದೆ. ಭಟ್ಟರು ಹೊಸ ಹುಡುಗರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಿರ್ದೇಶನ ನಿರ್ಮಾಣ ಎರಡೂ ಜವಾಬ್ದಾರಿಯನ್ನು ಭಟ್ಟರೇ ಹೊರಲಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಜನ ನಾಯಕರಿದ್ದು ಎಲ್ಲರೂ ಹೊಸಮುಖಗಳೇ ಅಂತೆ. ಇದೀಗ ಹೊಸ ನಟ ನಟಿಯರ ಆಡಿಷನ್ ಶುರುವಾಗಿದ್ದು ಭಟ್ಟರ ಚಿತ್ರದಲ್ಲಿ ನಟಿಸುವುದಕ್ಕೆ ಆಸೆ ಇರುವವರು ಈ ಆಡಿಷನ್ನಿನಲ್ಲಿ ಪಾಲ್ಗೊಳ್ಳಬಹುದಾಗಿದೆ.