ಭಾಸ್ಕರ್ ಶೆಟ್ಟಿ ಪ್ರಕರಣ : ನಾಳೆ ರಾಜೇಶ್ವರಿ ಬೇಲ್ ವಿಚಾರಣೆ

ಉಡುಪಿ : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಳಲ್ಲೊಬ್ಬರಾಗಿರುವ ರಾಜೇಶ್ವರಿ ಶೆಟ್ಟಿಯ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.

ಪ್ರಕರಣ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ಮುಂದೆ ಮಂಗಳವಾರ ಬಂದಿತ್ತಾದರೂ ಆರೋಪಿಯ ವಕೀಲರು ವಾದ ಮಂಡನೆಗೆ ಸಮಯಾವಕಾಶ ಕೇಳಿದ್ದರಿಂದ  ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.

ಭಾರೀ ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯ ತನಕ ಭಾಸ್ಕರ್ ಶೆಟ್ಟಿಯ ಪತ್ನಿಯಾಗಿರುವ ರಾಜೇಶ್ವರಿ (50), ಆಕೆಯ ಪುತ್ರ ನವನೀತ್ (20) ಮತ್ತು  ಅರ್ಚಕ ನಿರಂಜನ ಭಟ್ (26) ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿದ್ದರು. ಆರೋಪಿಗಳು ಶೆಟ್ಟಿಯ ದೇಹವನ್ನು ನಂದಳಿಕೆಯ ನಿರಂಜನ್ ಭಟ್ ಮನೆ ಪಕ್ಕದಲ್ಲಿರುವ ಯಾಗಶಾಲೆಯ ಂiÀiಜ್ಞ ಕುಂಡದಲ್ಲಿ ಹಾಕಿ ಸುಟ್ಟಿದ್ದರೆಂದು ಆರೋಪಿಸಲಾಗಿದ್ದು ಉಳಿದ ಅವಶೇಷಗಳನ್ನು ಪಳ್ಳಿ ಗ್ರಾಮದಲ್ಲಿ ಹರಿಯುವ ನದಿಗೆ ಎಸೆದಿದ್ದಾರೆಂದು ಆರೋಪಿಸಲಾಗಿದೆ.

ನಿರಂಜನ ಭಟ್ಟನ ತಂದೆ ಶ್ರೀನಿವಾಸ್ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರ ಎಂಬವರನ್ನು ಸಾಕ್ಷ್ಯ ನಾಶಪಡಿಸಿದ  ಆರೋಪದ ಮೇಲೆ ಬಂಧಿಸಲಾಗಿದ್ದರೂ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು ನವೆಂಬರ್ 2ರಂದು  ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.