ಪರಸ್ಪರ ಅರ್ಥೈಸಿಕೊಳ್ಳಲು ನೆರವಾದ ಭಾಷಾ ಸಂಗಮ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ತುಳುನಾಡಿನಲ್ಲಿ ಜಾತಿ-ಮತ-ಭಾಷಾ ಸೌಹಾರ್ದತೆ ಎಂಬ ನೆಲೆಗಟ್ಟಿನಲ್ಲಿ ಬದಿಯಡ್ಕದ ಬೋಳುಕಟ್ಟೆ ಮೈದಾನದಲ್ಲಿ ಐದು ದಿನಗಳ ಪರ್ಯಂತ ನಡೆಯುವ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದಲ್ಲಿ ಆಯೋಜಿಸಿದ ಬಹುಭಾಷಾ ಸಂಗಮ ಪರಸ್ಪರ ಅರ್ಥೈಸಿಕೊಳ್ಳಲು ಸಹಕಾರಿಯಾಯಿತು.

ಕಾಸರಗೋಡಿನಲ್ಲಿ ಮನೆ ಮಾತು ಕನ್ನಡವಾಗಿರುವ ವಿಶ್ವ ಕರ್ಮ ಸಮಾಜ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸಮಾಜ, ಒಕ್ಕಲಿಗ, ಆರ್ಯಮರಾಠ, ಬೈರ, ದಾಸಯ್ಯ, ಜೋಗಿ ಸಮಾಜ, ಹವ್ಯಕ, ಶಿವಳ್ಳಿ,ಕರಾಡ, ಕೊಂಕಣಿ, ಉರ್ದು  ಭಾಷೆಗೆ ಸಂಬಂಧಿಸಿದ ಸಾಹಿತ್ಯ, ಆಚಾರ-ವಿಚಾರ ವಿನಿಮಯ, ಸಾಂಸ್ಕತಿಕ ಪ್ರದರ್ಶನ ಮನಸೂರೆಗೊಂಡಿತು.

mjr4-kreede2

ಕಾರ್ಯಕ್ರಮದಲ್ಲಿ ಆರ್ಯಮರಾಠ ಸಮುದಾಯ ಪ್ರದರ್ಶಿಸಿದ ಮದುವೆಯ ರೂಪಕ ಗಮನ ಸೆಳೆಯಿತು. ಮರಾಠ ಸಮಾಜದ ವಿವಾಹ ರೀತಿ, ರಿವಾಜುಗಳ ಬಗ್ಗೆ ರೂಪಕ ನೀಡಿದರು. ದಾಸಯ್ಯ ಸಮಾಜದ ಬಗ್ಗೆ ಚಂದ್ರಹಾಸ ದಾಸ್, ಜೋಗಿ ಸಮಾಜದ ಬಗ್ಗೆ ವಿಠಲ ಜೋಗಿ ತಮ್ಮ ಸಮಾಜದ ಆಚಾರ ವಿಚಾರಗಳ ಬಗ್ಗೆ ಹಾಗು ಕುಲಕಸುಬಿನ ಬಗ್ಗೆ ಮಾಹಿತಿ ನೀಡಿದರು.

ಶನಿವಾರದಂದು ವಿಶ್ವ ತುಳುವರೆ ಅಯಿನೊದ ವಿವಿಧ ಕ್ರೀಡೆಗಳು ನಡೆದವು. ಇದನ್ನು ವೀಕ್ಷಿಸಲು ಜನ ಸಾಗರವೇ ಹರಿದು ಬಂದಿತ್ತು.