ಭಾರತ ದರ್ಶನ ವಿಶೇಷ ರೈಲು ಓಡಾಟ ಇಂದಿದಿಂದ ಆರಂಭ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಂಕಣ ರೈಲ್ವೇಯು ದಕ್ಷಿಣ ರೈಲ್ವೇ ಸಹಯೋಗದಲ್ಲಿ ಭಾರತ ದರ್ಶನ ವಿಶೇಷ ರೈಲು ಸೇವೆಯನ್ನು ಮಧುರೈ ಮತ್ತು ಮಡಗಾಂ ನಡುವೆ ಶನಿವಾರದಿಂದ ಓಡಾಟ ಆರಂಭಿಸಲಿದೆ. ಈ ರೈಲು ಎರಡು ಎಸಿ 3 ಟೈರ್ ಕೋಚುಗಳನ್ನು ಮತ್ತು 4 ಸ್ಲೀಪರ್ ಕ್ಲಾಸ್ ಕೋಚುಗಳನ್ನು ಹೊಂದಿದೆ. ರಿಸರ್ವೇಷನ್ ವ್ಯವಸ್ಥೆಯಡಿಯಲ್ಲಿ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ.

ಟ್ರೈನ್ 06901 ಮಧುರೈ- ಚೆನ್ನೈ ಇಗ್ಮೋರ್ ಸ್ಪೆಷರ್ ರೈಲು ಮಧುರೈಯಿಂದ ಜನವರಿ 7ರಂದು ಮಧ್ಯರಾತ್ರಿ 12.05ಕ್ಕೆ ಹೊರಟು ಅದೇ ದಿನ 10.30ಕ್ಕೆ ಚೆನ್ನೈ ಇಗ್ಮೋರಗೆ ತಲುಪಲಿವೆ. ದಿಂಡಿಗುಲ್, ತಿರುಚಾಚಿರಪಳ್ಳಿ ಮತ್ತು ವಿಳ್ಳುಪುರಂ ಜಂಕ್ಷನ್ನಿನಲ್ಲಿ ನಿಲುಗಡೆಗಳಿವೆ.

ಟ್ರೈನ್ 06902 ಚೆನ್ನೈ ಇಗ್ಮೋರ್-ಎರ್ನಾಕುಳಂ ಜಂಕ್ಷನ್ ಸ್ಪೆಷಲ್ ರೈಲು ಚೆನ್ನೈ ಇಗ್ಮೋರನಿಂದ ಜನವರಿ 7ರಂದು ಬೆಳಿಗ್ಗೆ 10.50ಕ್ಕೆ ಹೊರಟು ಎರ್ನಾಕುಳಂ ಜಂಕ್ಷನ್ನಿಗೆ ಮರುದಿನ ರಾತ್ರಿ 2.20ಕ್ಕೆ ತಲುಪಲಿದೆ. ಈ ರೈಲು ಕಟಪಾಟಿ, ಜೋಲಾರಪೆಟ್ಟಯಿ, ಸೇಲಂ ಜಂಕ್ಷನ್, ಇರೋಡ್ ಜಂಕ್ಷನ್, ಪೊಡನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ವಡಕಂಚೆರಿ ಮತ್ತು ತ್ರಿಶ್ಶೂರಿನಲ್ಲಿ ನಿಲುಗಡೆಯಾಗಲಿವೆ.

ಟ್ರೈನ್ 06903 ಎರ್ನಾಕುಳಂ ಜಂಕ್ಷನ್ ಮಡಗಾಂ ಸ್ಪೆಷಲ್ ಫೇರ್ ಸ್ಪೆಷಲ್ ಟ್ರೈನ್ ಜನವರಿ 8ರಂದು ಸಂಜೆ 7.15ಕ್ಕೆ ಎರ್ನಾಕುಳಂ ಜಂಕ್ಷನ್ನಿನಿಂದ ಹೊರಟು ಮರುದಿನ ಬೆಳಗ್ಗೆ 10.30ಕ್ಕೆ ಮಡಗಾಂ ತಲುಪುತ್ತದೆ.

ಟೈನ್ 06904 ಮಡಗಾಂ ಚೆನ್ನೈ ಇಗ್ಮೋರು ವಿಶೇಷ ರೈಲು ಜನವರಿ 11ರಂದು ಮಧ್ಯಾಹ್ನ 2.20ಕ್ಕೆ ಮಡಗಾಂನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ಮದ್ಯಾಹ್ನ 2.20ಕ್ಕೆ ಚೆನ್ನೈ ಇಗ್ಮೋರಗೆ ತಲುಪಲಿದೆ.

ಟ್ರೈನ್ 82649 ಚೆನ್ನೈ ಇಗ್ಮೋರ್-ಮಧುರೈ ಸುವಿಧ ವಿಶೇಷ ರೈಲು ಜನವರಿ 12ರಂದು ಮಧ್ಯಾಹ್ನ 2.25ಕ್ಕೆ ಚೆನ್ನೈ ಇಗ್ಮೋರಿನಿಂದ ಹೊರಟು ಅದೇದಿನ ರಾತಿ 11.55 ಕ್ಕೆ ಮಧುರೈ ತಲುಪಲಿದೆ.