ಭಾಗ್ವತ್ ಹೇಳಿಕೆ ಭಾರತೀಯರನ್ನು ಅವಮಾನಿಸಿದೆ : ರಾಹುಲ್

ನವದೆಹಲಿ : ಅಗತ್ಯ ಬಿದ್ದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶಕ್ಕಾಗಿ ಹೋರಾಡಲು ಸೇನೆಯನ್ನು ಮೂರು ದಿನಗಳಲ್ಲಿಯೇ ಸನ್ನದ್ಧಗೊಳಿಸುವ ಸಾಮಥ್ರ್ಯ ಹೊಂದಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಲವಾಗಿ ಖಂಡಿಸಿದ್ದಾರೆ. ತಮ್ಮ ಹೇಳಿಕೆಯ ಮೂಲಕ ಭಾಗ್ವತ್ ಅವರು ಪ್ರತಿಯೊಬ್ಬ ಭಾರತೀಯನನ್ನು ಅವಮಾನಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ದೇಶದ ಹುತಾತ್ಮರಿಗೂ ಅದು ಅಗೌರವ  ಸೂಚಿಸಿದೆಯಲ್ಲದೆ ರಾಷ್ಟ್ರಧ್ವಜ ಹಾಗೂ ಅದಕ್ಕೆ ನಮಿಸುವ ಪ್ರತಿಯೊಬ್ಬ ಸೈನಿಕನನ್ನೂ ಭಾಗ್ವತ್ ಅವರ ಹೇಳಿಕೆ ಅವಮಾನಿಸಿದೆ ಎಂದು ರಾಹುಲ್ ಹೇಳಿದ್ದಾರೆ.  ಆದರೆ ಭಾಗ್ವತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೆಸ್ಸೆಸ್ ಹೇಳಿಕೊಂಡಿದೆ.

LEAVE A REPLY