ಭಗವದ್ಗೀತೆ ಸುಡುತ್ತೇನೆ ಎಂದಿದ್ದ ಭಗವಾನ್, ಮಾಲಗತ್ತಿಗೆ ಜಾಮೀನು

ಮೈಸೂರು : ಇಲ್ಲಿನ ರಾಣಿ ಬಹಾದ್ದುರ್ ಸಭಾಂಗಣದಲ್ಲಿ ಫೆಬ್ರವರಿ 15, 2015ರಂದು ನಡೆದ  “ಭಗವದ್ಗೀತೆ ರಾಷ್ಟ್ರೀಯ ಗ್ರಂಥವೇ?” ಎಂಬ ವಿಚಾರಸಂಕಿರಣದಲ್ಲಿ  ಭಗವದ್ಗೀತೆಯನ್ನು ಸುಡುವುದಾಗಿ ಹೇಳಿಕೆ ನೀಡಿದ್ದ  ಹಿರಿಯ ಲೇಖಕ ಕೆ ಎಸ್ ಭಗವಾನ್ ಹಾಗೂ  ಇನ್ನೊಬ್ಬ ಲೇಖಕ ಅರವಿಂದ ಮಾಲಗತ್ತಿಗೆ ಇಲ್ಲಿನ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯ  ನಿರೀಕ್ಷಣಾ ಜಾಮೀನು ನೀಡಿದೆ.

2015ರಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಗವಾನ್ ತಮ್ಮ ವಿವಾದಾತ್ಮಕ ಹೇಳಿಕೆ ನೀಡುವಾಗ ಅರವಿಂದ ಮಾಲತ್ತಿ,  ಹಾಗೂ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಬಿ ಪಿ ಮಹೇಶ್ಚಂದ್ರ ಗುರು  ಕೂಡ  ಅದನ್ನು ಪುನರುಚ್ಛರಿಸಿದ್ದರು.

ಎಲ್ಲಾ ಆರೋಪಿಗಳೂ ಮಾರ್ಚ್ 7, 2015ರಂದೇ ಜಾಮೀನು ಪಡೆದಿದ್ದರೂ, ಭಗವಾನ್ ಹಾಗೂ ಮಾಲಗತ್ತಿ ತನಿಖೆಗೆ ಸಹಕರಿಸದೇ ಇದ್ದುದರಿಂದ ಹಾಗೂ ಜಾಮೀನಿನ ಷರತ್ತು ಉಲ್ಲಂಘಿಸಿದ್ದರಿಂದ ಅವರ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿತ್ತು.

 

LEAVE A REPLY