ಸಿದ್ಧಕಟ್ಟೆ ಪರಿಸರದಲ್ಲಿ ನಕಲಿ ಜ್ಯೋತಿಷಿ ಇದ್ದಾನೆ ಎಚ್ಚರ

ತಮ್ಮ ಕಷ್ಟಗಳಿಗೆ ಜ್ಯೋತಿಷ್ಯರ ಮೊರೆ ಹೋಗುವ ಜನರಿಗೊಂದು ಎಚ್ಚರಿಕೆ ಪಾಠ. ಜ್ಯೋತಿಷ್ಯ ಕೇಳಲು ಹೋದವರ ಬಳಿ ನಿಮಗೆ ಪ್ರೇತಭಾದೆ ಇದೆ. ಪ್ರೇತಬಾಧೆ ತೆಗೆಸಲೇಬೇಕು. ನಿಮ್ಮ ಮನೆಗೆ ಕೆಲವು ದೈವದ ಪ್ರವೇಶವಾಗಿದೆ. ಆ ದೈವಗಳನ್ನು ನಂಬಿ ದೈವಸ್ಥಾನ ಕಟ್ಟಲೇಬೇಕು. ಇಲ್ಲದಿದ್ದರೆ ಸುಖವಿಲ್ಲದಂತಾಗಿ ಅಪಾಯ ಖಂಡಿತಾ. ಪ್ರೇತಬಾಧೆಗೆ ರಕ್ಷೆ ಮಾಡಿ ಕೊಡುತ್ತೇನೆ ಎಂದೆಲ್ಲ ಬೊಗಳೆ ಬೀಡುವ ನಕಲಿ ಜ್ಯೋತಿಷಿಯೊಬ್ಬ ಹಲವಾರು ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ದಾನೆ ಸಿದ್ಧಕಟ್ಟೆ ನೇತಾಜಿ ರಸ್ತೆಯಲ್ಲಿರುವ ಈ ಜ್ಯೋತಿಷಿಯಿಂದ ಮೋಸದಾಟ ನಡೆಯುತ್ತಿದೆ. ಅನಾದಿಕಾಲ ಆರಂಬೋಡಿ ನಮ್ಮ ಕುಟುಂಬವನ್ನು ತನ್ನ ಸ್ವಾರ್ಥ ಸಾಧನೆಗೋಸ್ಕರ ಒಡೆದಿದ್ದಾನೆ. ಈತನ ಕಪಟ ನಾಟಕ ಅರಿಯದ ಕುಟುಂಬ ಇವನ ಮಾತಿಗೆ ಮರುಳಾಗಿ ಎರಡು ಕಡೆ ದೈವಸ್ಥಾನ ಆಗುವಂತೆ ಮಾಡಿದ್ದಾನೆ ಅದೂ ಅಲ್ಲದೆ ರಾಯಿ ಗ್ರಾಮದ ಇನ್ನೊಂದು ಕುಟುಂಬವನ್ನು ಕೂಡ ಇದೇ ರೀತಿ ಒಡೆದಿದ್ದಾನೆ ಪ್ರೇತ ಬಿಡಿಸುತ್ತೇನೆಂದು ಅಮಾಯಕರನ್ನು ನಂಬಿಸಿ ವಂಚನೆ ಮಾಡುವುದೇ ಇವರ ಕಾಯಕ ಜ್ಯೋತಿಷ್ಯ ಕೇಳಲು ಹೋದವರಲ್ಲಿ ತಾನೇ ದೇವರು ಮಲೆಯಾಳಿ ಮಂತ್ರ ಕಲಿತಿದ್ದೇನೆಂದು ಬೊಗಳೆ ಬಿಡುತ್ತಿರುವ ಈತನಲ್ಲಿ ಹಳ್ಳಿ ಮುಗ್ಧ ಜನ ಹೆಣ್ಣು ಮಕ್ಕಳು ಜಾಗ್ರತೆಯಿಂದ ಇರುವುದು ಒಳ್ಳೆಯದು ಮೋಸದಿಂದ ಕುಟುಂಬ ಒಡೆಯುವ ಇವನ ವಿಷಯ ಊರಿನವರಿಗೆ ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಆದ್ದರಿಂದ ಇನ್ನಾದರೂ ಸಿದ್ಧಕಟ್ಟೆ ಪರಿಸರ ನಾಗರಿಕರು ಎಚ್ಚೆತ್ತುಕೊಳ್ಳಲಿ

  • ಎಚ್ ಎನ್ ಪೂಜಾರಿ  ಅರಂಬೋಡಿ  ಬೆಳ್ತಂಗಡಿ