ಸೋಂಕಿರುವ ಕೋಳಿ ತಿಂದರೆ ರೋಗ ಖಾತ್ರಿ

ಇತ್ತೀಚೆಗೆ ಬೆಂಗಳೂರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಮಾರಕ ರೋಗ ಕೋಳಿಗಳ ಮೂಲಕ ಮನುಷ್ಯನಿಗೂ ಹರಡುವ ಸಾಧ್ಯತೆ ಹೆಚ್ಚುತ್ತಿದೆ. ನಗರದ ಜನರಿಗೆ ಈ ರೋಗದ ಬಗ್ಗೆ ಜಾಗೃತಿಯಿದ್ದರೂ ಹಳ್ಳಿಗಳಲ್ಲಿ ಮಾಹಿತಿ ಇರುವುದಿಲ್ಲ. ಹಾಗಾಗಿ ಈ ರೋಗ ಎಲ್ಲೆಡೆ ಹರಡುವ ಸಾಧ್ಯತೆ ಹೆಚ್ಚಾಗಿದೆ ದೊಡ್ಡ ದೊಡ್ಡ ನಗರಗಳಲ್ಲಿ ಕೋಳಿಗಳಿಗೆ ಹಕ್ಕಿ ಜ್ವರದ ಸೋಂಕು ತಗುಲಿದ ಸುದ್ದಿಯಿಂದ ಕುಕ್ಕುಟೋದ್ಯಮ ತತ್ತರಿಸಿದೆ. ಹೆಚ್ಚಿನ ಕಡೆ ಕೋಳಿಯನ್ನು ತಿನ್ನುವುದನ್ನೇ ಬಿಟ್ಟಿದ್ದಾರೆ. ಕೋಳಿ ಬೆಲೆ ಕೆಜಿಗೆ 120 ಇದ್ದದ್ದು 80, 90 ರೂಪಾಯಿಗೆ ಇಳಿಕೆಯಾಗಿದೆಯಂತೆ. ಒಂದೊಮ್ಮೆ ಬೆಲೆ ಕಡಿಮೆ ಎಂದು ಸೋಂಕಿರುವ ಕೋಳಿ ತಿಂದರೆ ಈ ರೋಗಕ್ಕೆ ಬಲಿಯಾಗುವುದು ಖಂಡಿತಾ
ಆದ್ದರಿಂದ ಈ ರೋಗ ವ್ಯಾಪಕವಾಗಿ ಹರಡುವ ಮೊದಲು ಎಚ್ಚೆತ್ತುಕೊಳ್ಳಬೇಕು ಹಳ್ಳಿಗಳಲ್ಲಿ ಈ ರೋಗದ ಬಗ್ಗೆ ಮಾಹಿತಿ ತಲುಪಿಸಬೇಕು ಪಶುಸಂಗೋಪಣೆ ಇಲಾಖೆ ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ತೆಗೆದು ವಿಶೇಷ ತಂಡ ನೇಮಿಸಿ ಎಲ್ಲಾ ಕಡೆಯಲ್ಲೂ ಮಾಹಿತಿ ನೀಡುವಂತಾಗಲಿ

  • ರಮಾನಂದ ಚೌಟ  ಮುಳಿಹಿತ್ಲು

LEAVE A REPLY