ಬೆಂಗಳೂರು, ಮೈಸೂರು ವೀಸಿ ಹುದ್ದೆ 3 ತಿಂಗಳಿಂದ ಖಾಲಿ

ಬೆಂಗಳೂರು : ಕಳೆದ ಮೂರು ತಿಂಗಳುಗಳಿಂದ ರಾಜ್ಯದ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಹುದ್ದೆ ಖಾಲಿ ಬಿದ್ದಿವೆ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳ ನೇಮಕ ಸಂಬಂಧ ರಚಿತವಾಗಿರುವ ಸಮಿತಿ ಬುಧವಾರ ಸಭೆ ಸೇರಬೇಕಿದ್ದರೂ ಅದು ಮುಂದೂಡಲ್ಪಟ್ಟಿದೆ.