ಬೆಂಗಳೂರಿನಲ್ಲಿ ಐಟಿ ವೃತ್ತಿಪರರಿಗೆ ಅತ್ಯಧಿಕ ವೇತನ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಭಾರತದಲ್ಲೇ ವೃತ್ತಿಪರರಿಗೆ ಅತ್ಯಂತ ಹೆಚ್ಚು  ವಾರ್ಷಿಕ ಸರಾಸರಿ ವೇತನ ಒದಗಿಸುವ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರ್ಯಾಂಡ್ ಸ್ಟ್ಯಾಡ್ ಸ್ಯಾಲರಿ ಟ್ರೆಂಡ್ಸ್  ಸ್ಟಡಿ 2017 ಪ್ರಕಾರ ಬೆಂಗಳೂರಿನಲ್ಲಿ ವೃತ್ತಿಪರರ ಸರಾಸರಿ ವಾರ್ಷಿಕ ವೇತನ ರೂ 14.6 ಲಕ್ಷ ಆಗಿದೆ. ಬೆಂಗಳೂರಿನ ನಂತರದ ಸ್ಥಾನ  ಸರಾಸರಿ ರೂ 14.2 ಲಕ್ಷ ಹಾಗೂ ರೂ 13.6 ಲಕ್ಷ ವೇತನವಿರುವ ಮುಂಬೈ ಮತ್ತು ಹೈದರಾಬಾದ್ ನಗರಗಳಿಗೆ ಕ್ರಮವಾಗಿ ಹೋಗಿವೆ. ಜಾವಾ ಪ್ರೊಗ್ರಾಮರುಗಳು ಅತ್ಯಧಿಕ ವೇತನ ಪಡೆಯುವ ಐಟಿ ವೃತ್ತಿಪರರಾಗಿದ್ದು ವಾರ್ಷಿಕ ಸರಾಸರಿ ರೂ 18 ಲಕ್ಷ ವೇತನ ಪಡೆಯುತ್ತಾರೆ.