ಬಂಗಾಳಿ ಯುವಕನಿಗೆ ವಂಚನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಹಣವನ್ನು ಖಾತೆಗೆ ಜಮೆ ಮಾಡಲು ಬ್ಯಾಂಕಿಗೆ ಬಂದ ಪಶ್ಚಿಮ ಬಂಗಾಳದ ಜಯಪುರ್ ನಿವಾಸಿ ಕಮಲ ರೋಯಿ (25) ಅವರಿಗೆ ಇಬ್ಬರು ಬಂಗಾಳಿ ನಿವಾಸಿಗಳು 8000 ರೂ ವಂಚಿಸಿದ ಘಟನೆ ನಡೆದಿದೆ.

ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುನ್ನ ಕಾಸರಗೋಡು ರೈಲು ನಿಲ್ದಾಣ ರಸ್ತೆಯಲ್ಲಿರುವ ಎಸ್ ಬಿ ಐ ಶಾಖೆಗೆ ಬಂದಿದ್ದ ಕಮಲ್ ರೋಯ್ ಹಿಂದೆ ನಿಂತಿದ್ದ ಇನ್ನಿಬ್ಬರು ಬಂಗಾಳಿ ನಿವಾಸಿಗಳು ಬ್ಯಾಂಕಿನಲ್ಲಿ ಸರದಿ ನಿಲ್ಲಲು ಸಮಯವಿಲ್ಲ ಎಂದು ಕಾರಣ ನೀಡಿ, ಒಂದೂವರೆ ಲಕ್ಷ ರೂ ಬ್ಯಾಂಕ್‍ಗೆ ಪಾವತಿಸಲು ಹೇಳಿ ಕಂತೆಯೊಂದನ್ನು ನೀಡಿದರು. ಎಂಟು ಸಾವಿರ ರೂ ಅಗತ್ಯವಿದೆ ಎಂದು ಅವರು ಹೇಳಿದಾಗ ತನ್ನ ಕೈಯಲ್ಲಿದ್ದ 8 ಸಾವಿರ ರೂ ನೀಡಿ ಕಂತೆಯಿಂದ ಹಣ ಪಡೆದುಕೊಳ್ಳುವುದಾಗಿ ಕಮಲ್ ರೋಯ್ ಹೇಳುತ್ತಿದ್ದಂತೆ ಇಬ್ಬರು ಸ್ಥಳ ಬಿಟ್ಟಿದ್ದರು. ಕಂತೆ ತೆರೆದು ನೋಡಿದಾಗ ನೋಟಿನ ಬದಲಾಗಿ ಬಿಳಿ ಹಾಳೆಗಳು ಮಾತ್ರವೇ ಇದ್ದವು. ವಂಚನೆಗೊಳಗಾಗಿರುವುದು ತಿಳಿದು ಕಮಲ್ ಪೆÇಲೀಸರಿಗೆ ದೂರು ನೀಡಿದ್ದಾರೆ. ಬ್ಯಾಂಕಿನ ಸಿಸಿಟಿವಿಯ ದೃಶ್ಯಗಳನ್ನು ಶೋಧಿಸಿ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಪೆÇಲೀಸರು ತಿಳಿಸಿದ್ದಾರೆ.