ಖ್ಯಾತ ಬಂಗಾಲಿ ನಟಿ ಸುಪ್ರಿಯಾ ದೇವಿ ನಿಧನ

ಕೋಲ್ಕತ್ತ : ಖ್ಯಾತ ಬಂಗಾಲಿ ನಟಿ ಸುಪ್ರಿಯಾ ದೇವಿ ನಿನ್ನೆ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 85 ವರ್ಷವಾಗಿತ್ತು. ಚಿತ್ರರಂಗದಲ್ಲಿ ನಾಲ್ಕು ದಶಕ ಕೆಲಸ ಮಾಡಿದ್ದ ದೇವಿ, 1952ರಲ್ಲಿ ಉತ್ತಮ ಕುಮಾರರ `ಬಸು ಪರಿವಾರ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. `ಸೋನಾರ್ ಹರಿನ್’, ಚೌರಂಗಿ, ಬಾಗ್ ಬಂದಡಿ ಖೇಲ್ ಮತ್ತು `ಮೇಘೆ ಢಾಕ ತಾರ’ ಅವರ ಹಿಟ್ ಚಿತ್ರಗಳಾಗಿವೆ. ಪದ್ಮಶ್ರೀ ಪುರಸ್ಕøತ ದೇವಿ ಪಶ್ಚಿಮ ಬಂಗಾಲ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಬಂಗ ವಿಭೂಷಣ ಗಳಿಸಿದ್ದರು. ಜೀವನ ಸಾಧನೆಗಾಗಿ ಫಿಲ್ಮ್‍ಫೇರ್ ಪೂರ್ವ ಪ್ರಶಸ್ತಿ ಗಳಿಸಿದ್ದರು.

LEAVE A REPLY