ಬುಡಕಟ್ಟು ಜನರ ಯೋಜನೆ ಅನ್ಯರ ಕೈ ಸೇರಿದರೆ ಸಚಿವರ ಕಳಕಳಿಗೆ ಬೆಲೆ ಎಂತು

ಸಮಾಜ ಕಲ್ಯಾಣ ಸಚಿವ ಆಂಜನೇಯ ಕಳೆದ ಮೂರು ವರ್ಷದಿಂದ ಬೇರೆ ಬೇರೆ ಹಾಡಿ, ಕಾಲೋನಿಗಳಲ್ಲಿ ತಂಗಿದ್ದಾರೆ ಇದರಲ್ಲಿ ರಾಜಕೀಯ ಎಷ್ಟಿದೆ  ಅವರ ಸಾಮಾಜಿಕ ಕಳಕಳಿ ಎಷ್ಟಿದೆ ಎಂದು ಗೊತ್ತಾಗುವುದು ಕಷ್ಟ  ಸರಕಾರ ಅನೇಕ ಯೋಜನೆ ಜಾರಿಗೆ ತಂದು ಸೌಲಭ್ಯಗಳನ್ನು ಒದಗಿಸಿದರೂ ಅವುಗಳು ಇಂತಹ ಬುಡಕಟ್ಟು ಸಮುದಾಯದವರಿಗೆ ಮುಟ್ಟುತ್ತಿಲ್ಲ  ಅವುಗಳು ಯಾರ ಪಾಲಾಗುತ್ತಿದ್ದವೋ ದೇವರೇ ಬಲ್ಲ ಪ್ರಕೃತಿ ದೇವತೆಯ ಮಕ್ಕಳಿಗೆ ಸರಕಾರ ಮೂಲಸೌಲಭ್ಯ ಸಿಗುವಂತಾದಾಗ ಮಾತ್ರ ಸಚಿವರ ಸಾಮಾಜಿಕ ಕಳಕಳಿಗೆ ಬೆಲೆ ಬಂದೀತು

 ಕೆ ಕೊಗ್ಗು ಮೇಸ್ತ್ರಿ ಉಡುಪಿ