ರಾಜಕೀಯ ಕಪಿಮುಷ್ಠಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ

ದ ಕ ಜಿಲ್ಲೆ ಬೆಳ್ತಂಗಡಿ ತಾಲೂಕು ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ ಕಾನೂನು ಸುವ್ಯವಸ್ಥೆಗಾಗಿ ಬೆಳ್ತಂಗಡಿ ತಾಲೂಕಿನಲ್ಲಿ ನಾಲ್ಕು ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿದೆ ದಕ್ಷ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಬೆಳ್ತಂಗಡಿ ತಾಲೂಕಿನಲ್ಲಿದ್ದಾರೆ ಆದರೆ ರಾಜಕೀಯ ವ್ಯಕ್ತಿಗಳ ಕಪಿ ಮುಷ್ಠಿಯಲ್ಲಿ ಈ ಪೊಲೀಸ್ ಠಾಣೆಗಳು ನಲುಗುತ್ತಿವೆ ಕೊಲೆ  ಸುಲಿಗೆ  ಅತ್ಯಾಚಾರ  ದರೋಡೆ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾದ ಕೂಡಲೇ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಕೊಡದೇ ರಾಜಕೀಯ ಒತ್ತಡ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕುತ್ತಿದೆ ಇಲ್ಲಿ ರಾಜಕೀಯ ಪ್ರಭಾವ ಇರುವವರ ಮೂಗಿನ ನೇರಕ್ಕೆ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಬೇಕಾದುದು ಅನಿವಾರ್ಯ ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪಂಚಾಯತ್ ಸದಸ್ಯರೊಬ್ಬರ ಮಗನಿಗೆ ಮಾರಣಾಂತಿಕ ಹಲ್ಲೆ ನಡೆದಾಗ ನಾಲ್ಕು ದಿನದ ಬಳಿಕ ಠಾಣೆ ಅಧಿಕಾರಿಗಳು ಮಹಜರು ನಡೆಸಿ ಪ್ರಕರಣ ವಿಳಂಬವಾಗಿ ದಾಖಲಿಸಿ ದುರ್ಬಲ ಸೆಕ್ಷನ್ ಹಾಕಲು ರಾಜಕೀಯ ಒತ್ತಡವೇ ಕಾರಣ ಜನಸಾಮಾನ್ಯರು ಮಧ್ರ್ಯವರ್ತಿಗಳಿಲ್ಲದೆ ಪೊಲೀಸ್ ಠಾಣೆ ಮೆಟ್ಟಲೇರಲು ಹಿಂಜರಿಯುವಂತಾಗಿದೆ ಇಂತಹ ಎಷ್ಟೇ ಕೊಲೆ ಸುಲಿಗೆ ಅತ್ಯಾಚಾರ ಅವ್ಯವಹಾರ ಪ್ರಕರಣಗಳು ಬೆಳ್ತಂಗಡಿ ಠಾಣೆಯಲ್ಲಿ ಮುಚ್ಚಿ ಹೋಗಿವೆ ದಕ್ಷ ನಿಷ್ಠಾವಂತ ಪೋಲಿಸ್ ವರಿಷ್ಠಾಧಿಕಾರಿಗಳೇ ಬೆಳ್ತಂಗಡಿ ತಾಲೂಕಿನ ಜನಸಾಮಾನ್ಯರಿಗೆ ಎಲ್ಲ್ಲಾ ಪ್ರಕರಣಗಳನ್ನು ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲು ಅನಾನುಕೂಲವಿದೆ ಇನ್ನಾದರೂ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಲು ಬೆಳ್ತಂಗಡಿ ತಾಲೂಕಿನ ಪೊಲೀಸ್ ಅಧಿಕಾರಿಗಳಿಗೆ ಪ್ರೋತ್ಸಾಹಿಸಿ ಪ್ರೇರೆಪಣೆ ನೀಡಬೇಕಾಗಿ ಬೆಳ್ತಂಗಡಿ ತಾಲೂಕಿನ ಜನಸಾಮಾನ್ಯರ ಕಳಕಳಿ ವಿನಂತಿ

  • ಶಶಿಧರ ಕೆ  ಮಡಂತ್ಯಾರು