ಬೆಳಲು ಸಂಪರ್ಕ ರಸ್ತೆ ಕೆಟ್ಟಿದೆ

ಉಜಿರೆಯಿಂದ ಬೆಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆ ಬೆಳಾಲು ಕ್ರಾಸಿನಿಂದ ಸುಮಾರು ಒಂದು ಕಿ ಮೀ ದೂರ ತೀರಾ ಹದಗೆಟ್ಟು ರಸ್ತೆ ಇದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ. ಸಂಬಂಧಪಟ್ಟವರ ಗಮನಕ್ಕೆ ಹಲವಾರು ಬಾರಿ ತಂದರೂ ಏನೂ ಪ್ರಯೋಜನವಾಗಿಲ್ಲ. ಸಂಚಾರವೇ ಅಸಾಧ್ಯವಾಗಿರುವ ರಸ್ತೆಗೆ ಸ್ಥಳೀಯ ರಿಕ್ಷಾ ಚಾಲಕರು ಶ್ರಮದಾನದ ಮೂಲಕ ತಾತ್ಕಾಲಿಕ ಹೊಂಡ ಮುಚ್ಚುವ ಕೆಲಸ ಮಾಡಿದ ಸುರಿದ ಭಾರೀ ಮಳೆಗೆ ಮತ್ತೆ ರಸ್ತೆ ಪೂರಾ ಹೊಂಡ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಓಟ್ಟಿನಲ್ಲಿ ಈ ರಸ್ತೆಯಲ್ಲಿ ಓಡಾಡುವ ದ್ವಿಚಕ್ರ, ತ್ರಿಚಕ್ರ ವಾಹನಿಗರ ಚಾಲಕರ ಗೋಳು ಹೇಳತೀರದು  ಸಂಬಂಧಪಟ್ಟವರು ಇನ್ನಾದರೂ ಈ ರಸ್ತೆಗೆ ಮುಕ್ತಿ ಕೊಡುವರೇ ಕಾದು ನೋಡಬೇಕಿದೆ

  • ಸುಜನ್ ಸುವರ್ಣ  ಬೆಳಲು