ಸಚಿವ ಹೆಗಡೆ ಕಾರಿಗೆ ದಲಿತರಿಂದ ಘೇರಾವ್, ಕರಿ ಪತಾಕೆ ಪ್ರದರ್ಶನ

ಬೆಳಗಾವಿ : ಸಂವಿಧಾನದ ವಿರುದ್ಧ ಹೇಳಿಕೆ ಖಂಡಿಸಿದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಕಾರು ತಡೆದು, ಕರಿ ಪತಾಕೆ ಪ್ರದರ್ಶಿಸಿದರು. ಈ ವೇಳೆ ದಲಿತ ಕಾರ್ಯಕರ್ತರು ಹೆಗಡೆ ವಿರುದ್ಧ ಘೋಷಣೆ ಕೂಗಿದರು.

ಇಲ್ಲಿನ ಚನ್ನಮ್ಮ ಸರ್ಕಲ್ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ಹೆಗಡೆ ಆಗಮಿಸಿದ್ದು, ದಲಿತ ಕಾರ್ಯಕರ್ತರು ಹೆಗಡೆ ಕಾರಿನ ಎದುರು ಮೋರ್ಚಾ ಕೊಂಡೊಯ್ದು ಘೇರಾವ್ ಮಾಡಲು ಪ್ರಯತ್ನಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಕಾರ್ಯಕರ್ತರುನ್ನು ಕಸ್ಟಿಡಿಗೆ ತೆಗೆದುಕೊಂಡರು.

ತಾನು ಪ್ರತಿನಿಧಿಸುವ ಉತ್ತರಕನ್ನಡ ಮತ್ತು ಬೆಳಗಾವಿಯ ಭಾಗಗಳನ್ನು ಒಳಗೊಂಡ ಎರಡೂ ಜಿಲ್ಲೆಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಮತ್ತು ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದ ಹೆಗಡೆ, ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಸುದ್ದಿಗಾರರಲ್ಲಿ ಏನನ್ನೂ ಹೇಳಲು ನಿರಾಕರಿಸಿದರು.

ಸಂವಿಧಾನ ಬದಲಿಸಬೇಕೆಂದು ಹೇಳಿದ ಬಳಿಕ ಹೆಗಡೆ ದಲಿತ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದರೂ, ತನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದರು.

 

 

LEAVE A REPLY