ಬೇಕಲದ ಬಾಲಕಿ ಉಳ್ಳಾಲದಲ್ಲಿ ಪತ್ತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನಾಪತ್ತೆಯಾಗಿದ್ದ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ 13ರ ಹರೆಯದ ಬಾಲಕಿ ಉಳ್ಳಾಲದ ದರ್ಗಾದಲ್ಲಿ ಪತ್ತೆ ಹಚ್ಚಲಾಗಿದೆ.
ಮನೆಯಲ್ಲಿ ಓದಲು ಹೇಳುತ್ತಿದ್ದುದರಿಂದ ಮದ್ರಸಾಕ್ಕೆಂದು ಹೊರಟ ಬಾಲಕಿ ಕೋಟಿಕುಳಂ ರೈಲು ನಿಲ್ದಾಣದಲ್ಲಿ ರೈಲನ್ನೇರಿ ಉಳ್ಳಾಲ ನಿಲ್ದಾಣದಲ್ಲಿಳಿದು ದರ್ಗಾಕ್ಕೆ ಹೋಗಿದ್ದಳು.
ಬೇಕಲ ಪೊಲೀಸರು ಮತ್ತು ಸ್ಥಳೀಯರು ನಡೆಸಿದ ಹುಡುಕಾಟದ ಸಂದರ್ಭದಲ್ಲಿ ಬಾಲಕಿಯನ್ನು ಪತ್ತೆಹಚ್ಚಲಾಯಿತು.