ಬಸ್ ನಿಲ್ದಾಣದಲ್ಲಿ ಭಿಕ್ಷುಕರು

ಮಂಗಳೂರು ನಗರದಲ್ಲಿರುವ ಬಸ್ ನಿಲ್ದಾಣಗಳಲ್ಲಿ ಕುಡುಕರು, ಭಿಕ್ಷುಕರು ತಮ್ಮ ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ  ಇದರಿಂದ ಬಸ್ ನಿಲ್ದಾಣದೊಳಗೆ ಜನರು ಕಾಲಿಡುವುದೇ ಇಲ್ಲ. ಇದು ಕುಡುಕರ, ಭಿಕ್ಷುಕರ, ಅಲೆಮಾರಿಗಳ ತಂಗುದಾಣ ಅಷ್ಟೇ  ಇವೆಲ್ಲವನ್ನು ಸರಿಪಡಿಸಬೇಕಾಗಿ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು ಎಲ್ಲಿ ಬಿಲ ಸೇರಿದ್ದಾರೆ  ಮನಪಾ ಇನ್ನಾದರೂ ಕ್ರಮ ಕೈಗೊಳ್ಳುವುದೇ

  • ರಘು ಉರ್ವಾ  ಮಂಗಳೂರು